ಬೀಜಿಂಗ್: ಚೀನಾದ ಆಗ್ನೇಯ ಫುಜಿಯಾನ್ ಪ್ರಾಂತ್ಯದಲ್ಲಿ ಹೊಸದಾಗಿ 20 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಫುಜಿಯಾನ್ನಲ್ಲಿ 20, ಪುಟಿಯನ್ನಲ್ಲಿ 19, ಕ್ವಾನ್ಝೌನಲ್ಲಿ 1 ಪ್ರಕರಣ ಕಂಡು ಬಂದಿದ್ದು, ಒಟ್ಟಾರೆಯಾಗಿ 46 ಕೇಸ್ಗಳು ವರದಿಯಾಗಿವೆ.
ಈವರೆಗೆ ದೇಶದಲ್ಲಿ 95,199 ಪತ್ತೆಯಾಗಿದ್ದು, 4,636 ಮಂದಿ ಮೃತಪಟ್ಟಿದ್ದಾರೆ. 11,70,339 ಜನರು ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಸದ್ಯ ದೇಶದಲ್ಲಿ 12,140 ಸಕ್ರಿಯ ಕೇಸ್ಗಳಿವೆ.