ಸಿಯೋಲ್: ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಅವರ ಅಧಿಕಾರವಧಿ ಈ ವರ್ಷಕ್ಕೆ ಕೊನೆಗೊಳ್ಳಲಿದೆ. ಈ ಹಿನ್ನೆಲೆ ಕಳೆದ ತಿಂಗಳು ನೂತನ ಕ್ಯಾಬಿನೆಟ್ ರಚಿಸಿ ಹೊಸ ಪ್ರಧಾನಿ ಹಾಗೂ ನಾಲ್ವರು ಮಂತ್ರಿಗಳನ್ನು ನೇಮಿಸಿದ್ದಾರೆ.
ದಕ್ಷಿಣ ಕೊರಿಯಾಗೆ ನೂತನ ಪಿಎಂ: ಪ್ರಧಾನಿಯಾಗಿ ಕಿಮ್ ಬೂ ಕ್ಯುಮ್ ನೇಮಕ..! - ಕಿಮ್ ಬೂ ಕ್ಯುಮ್
ದಕ್ಷಿಣ ಕೊರಿಯಾದ ನೂತನ ಪ್ರಧಾನಿಯಾಗಿ ಕಿಮ್ ಬೂ ಕ್ಯುಮ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ನಾಲ್ವರು ಸಚಿವ ಸಂಪುಟಕ್ಕೆ ಸೇರಿಕೊಂಡಿದ್ದಾರೆ.
ಕಿಮ್ ಬೂ ಕ್ಯುಮ್
ಇಂದು ಅಧ್ಯಕ್ಷೀಯ ಬ್ಲೂ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ನೂತನ ಪಿಎಂ ಕಿಮ್ ಬೂ ಕ್ಯುಮ್ ಅವರಿಗೆ ಮೂನ್ ನೇಮಕಾತಿ ಪ್ರಮಾಣ ಪತ್ರ ನೀಡಿದರು. ವಿಜ್ಞಾನ ಮತ್ತು ಐಸಿಟಿ ಸಚಿವ ಲಿಮ್ ಹೆ-ಸೂಕ್, ವ್ಯಾಪಾರ- ಕೈಗಾರಿಕೆ ಮತ್ತು ಇಂಧನ ಸಚಿವ ಮೂನ್ ಸಂಗ್, ಉದ್ಯೋಗ ಮತ್ತು ಕಾರ್ಮಿಕ ಸಚಿವ ಆನ್ ಕ್ಯುಂಗ್-ಡುಕ್, ಭೂ, ಮೂಲಸೌಕರ್ಯ ಮತ್ತು ಸಾರಿಗೆ ಸಚಿವ ನೊಹ್ ಹಿಯೊಂಗ್ ಉಕ್ ಅವರಿಗೂ ಮೂನ್ ಪ್ರಮಾಣ ಪತ್ರ ನೀಡಿದರು.
ಇದನ್ನೂ ಓದಿ:ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ಪಲಾಯನ ಮಾಡುತ್ತಿರುವ ಪ್ಯಾಲೆಸ್ತೀನಿಯನ್ ಕುಟುಂಬಗಳು