ಕರ್ನಾಟಕ

karnataka

ETV Bharat / international

52 ಮಿಲಿಯನ್ ಜನತೆಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ ದಕ್ಷಿಣ ಕೊರಿಯಾ - ಕೊರೊನಾ ಲಸಿಕೆ

ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ, ಹಿರಿಯರು, ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾದ ಯುವ ಸಮುದಾಯ, ಪೊಲೀಸ್​​​ ಹಾಗೂ ಸೇನಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈಗಾಗಲೇ ನಾಗರಿಕರ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

South Korea to vaccine its 52 million people for free
52 ಮಿಲಿಯನ್ ಜನತೆಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ ದಕ್ಷಿಣ ಕೊರಿಯಾ

By

Published : Jan 11, 2021, 5:44 PM IST

ಸಿಯೋಲ್​​ (ದಕ್ಷಿಣ ಕೊರಿಯಾ): ಕೊರೊನಾ ತಡೆಯಲು ಪ್ರತಿಯೊಂದು ದೇಶಗಳು ಲಸಿಕೆಯ ಹಿಂದೆ ಬಿದ್ದಿದ್ದು, ಹಲವೆಡೆ ವಿತರಣೆ ಕಾರ್ಯ ಭರದಿಂದ ಸಾಗುತ್ತಿದೆ. ಕೆಲ ರಾಷ್ಟ್ರಗಳು ಜನತೆಗೆ ಉಚಿತವಾಗಿ ನೀಡಲು ಮುಂದಾಗಿವೆ. ಈ ಸಾಲಿಗೀಗ ದಕ್ಷಿಣ ಕೊರಿಯಾ ಸಹ ಸೇರಿಕೊಂಡಿದೆ.

ದ.ಕೊರಿಯಾ ಅಧ್ಯಕ್ಷ ಈ ಕುರಿತು ಘೋಷಿಸಿದ್ದು, ದೇಶದ ಜನತೆಗೆ ಉಚಿತವಾಗಿ ಹಂತ ಹಂತವಾಗಿ ಲಸಿಕೆ ನೀಡಲಾಗುವುದು ಎಂದಿದ್ದಾರೆ.

ಈ ಕುರಿತು ಅಧ್ಯಕ್ಷ ಮೂನ್​​​​-ಜೆ-ಇನ್​​ ಹೊಸ ವರ್ಷದಂದು ತಿಳಿಸಿದ್ದರು. ಫೆಬ್ರುವರಿಯಿಂದ ಲಸಿಕೆ ವಿತರಣೆಗೆ ಚಾಲನೆ ದೊರೆಯಲಿದೆ ಎಂದಿದ್ದಾರೆ. ದೇಶದ 56 ಮಿಲಿಯನ್​​​ ಜನತೆಗೆ ಲಸಿಕೆ ಈಗಾಗಲೇ ತಯಾರಾಗಿದೆ. ಆದರೆ 52 ಮಿಲಿಯನ್​​ ಜನತೆಗೆ ಸಾಕಾಗುವಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ, ಹಿರಿಯರು, ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾದ ಯುವ ಸಮುದಾಯ, ಪೊಲೀಸ್​​​ ಹಾಗೂ ಸೇನಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈಗಾಗಲೇ ನಾಗರಿಕರ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕತ್ತಲೆಯಲ್ಲಿ ಮುಳುಗಿದ ಪಾಕಿಸ್ತಾನ: ಇಮ್ರಾನ್ ಖಾನ್ ವಿರುದ್ಧ ನೆಟಿಜನ್ಸ್​ ಆಕ್ರೋಶ

ABOUT THE AUTHOR

...view details