ಕರ್ನಾಟಕ

karnataka

ETV Bharat / international

ಅಣ್ಣನನ್ನೇ ವರಿಸಿದ ತಂಗಿ.. ಮದುವೆ ದಿನ ಪೋಷಕರಿಗೆ ಗೊತ್ತಾದ್ರೂ ವಿರೋಧಿಸಲಿಲ್ಲ! ಕಾರಣ? - ಚೀನಾದಲ್ಲಿ ಅಣ್ಣನ ಮದುವೆಯಾದ ತಂಗಿ

ಕಳೆದ 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಪೋಷಕರಿಗೆ ಮದುವೆ ದಿನ ಸಿಕ್ಕಿದ್ದು, ಇದರಿಂದ ಸಂಭ್ರಮ ಮನೆ ಮಾಡಿದೆ.

Chinese woman
Chinese woman

By

Published : Apr 6, 2021, 7:26 PM IST

ಬೀಜಿಂಗ್​(ಚೀನಾ): ಚೀನಾದಲ್ಲಿ ಅಣ್ಣನನ್ನೇ ತಂಗಿಯೊಬ್ಬಳು ಮದುವೆಯಾಗಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಮಾರ್ಚ್​​​​ 31ರಂದು ಇಲ್ಲಿನ ಜಿಯಾಂಗ್ಸು ಪ್ರಾಂತ್ಯದಲ್ಲಿ ವಿಚಿತ್ರ ಕಾರ್ಯಕ್ರಮ ನಡೆದಿದೆ.

ಏನಿದು ಘಟನೆ?: ಕಳೆದ 20 ವರ್ಷಗಳ ಹಿಂದೆ ಮಹಿಳೆಯೊಬ್ಬಳು ತನ್ನ ಮಗಳನ್ನ ಕಳೆದುಕೊಂಡಿದ್ದಳು. ಆ ಮಗು ಅನಾಥಾಶ್ರಮ ಸೇರಿದ್ದರಿಂದ ಬೇರೆ ದಂಪತಿ ದತ್ತು ಪಡೆದುಕೊಂಡಿದ್ದರು. ಮಗಳನ್ನ ಕಳೆದುಕೊಂಡಿದ್ದ ಮಹಿಳೆ ತನ್ನ ಆಸರೆಗೋಸ್ಕರ ಗಂಡು ಮಗುವೊಂದನ್ನ ದತ್ತು ಪಡೆದುಕೊಂಡಿದ್ದಳು. ಇದೀಗ ಆತನಿಗೆ ಮದುವೆ ಮಾಡುವ ಉದ್ದೇಶದಿಂದ ವರ ನೋಡಿ, ಫಿಕ್ಸ್​ ಮಾಡಿದ್ದಾರೆ.

ಮಗನ ಕೈ ಹಿಡಿಯುತ್ತಿರುವುದು ಕಳೆದು ಹೋಗಿರುವ ಮಗಳು ಎಂಬ ಮಾಹಿತಿ ಮದುವೆ ದಿನ ಮಹಿಳೆಗೆ ಗೊತ್ತಾಗಿದೆ. ಈ ವೇಳೆ, ಆಕೆ ಕಣ್ಣೀರು ಹಾಕಿದ್ದು, ಕಳೆದ ಹೋದ ಮಗಳು ಸಿಕ್ಕಳು ಎಂಬ ಖುಷಿಯಲ್ಲಿ ಸಂಭ್ರಮಿಸಿದ್ದಾಳೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಹೊಸ ಆದೇಶ: 45 ವರ್ಷ ಮೇಲ್ಪಟ್ಟ ನೌಕರರು ಲಸಿಕೆ ಹಾಕಿಸಿಕೊಳ್ಳಲು ಸೂಚನೆ

ಮಗಳು ಪತ್ತೆಯಾಗಿದ್ದು ಹೇಗೆ?: ಕಳೆದು ಹೋಗಿದ್ದ ಮಗಳ ಕೈಯಲ್ಲಿ ಮಚ್ಚೆ ಇತ್ತು. ಇದೀಗ ದತ್ತು ಮಗನ ಮದುವೆ ಮಾಡಿಕೊಳ್ಳುತ್ತಿರುವ ಯುವತಿ ಕೈಯಲ್ಲಿ ಮಚ್ಚೆ ಇರುವುದನ್ನ ನೋಡಿದ್ದಾಳೆ. ಇದರ ಬಗ್ಗೆ ಖಚಿತ ಮಾಡಿಕೊಳ್ಳುವ ಉದ್ದೇಶದಿಂದ ಯುವತಿಯ ಹೆತ್ತವರನ್ನ ಸಂಪರ್ಕಿಸಿದ್ದಾಳೆ. ಆ ವೇಳೆ ಕಳೆದ 20 ವರ್ಷಗಳ ಹಿಂದೆ ಆಕೆಯನ್ನ ದತ್ತು ಪಡೆದುಕೊಂಡಿದ್ದಾಗಿ ಹೇಳಿದ್ದಾರೆ. ಆಗ ದತ್ತು ಮಗನ ಕೈಹಿಡಿಯುತ್ತಿರುವುದು ಕಳೆದು ಹೋಗಿರುವ ಮಗಳು ಎಂಬ ಮಾಹಿತಿ ಕನ್ಫರ್ಮ್​ ಆಗಿದೆ. ಜತೆಗೆ ಮದುವೆಗೆ ಎರಡು ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ.

ಮಹಿಳೆ ಗಂಡು ಮಗುವನ್ನ ದತ್ತು ಪಡೆದುಕೊಂಡಿದ್ದರಿಂದ ಈ ಮದುವೆಗೆ ಯಾವುದೇ ರೀತಿಯ ಆಕ್ಷೇಪ ವ್ಯಕ್ತವಾಗಿಲ್ಲ ಎಂದು ಅವರು ಇದೀಗ ತಿಳಿಸಿದ್ದಾರೆ. ಇನ್ನು ಕಾಣೆಯಾಗಿದ್ದ ಮಗಳು ಹುಡುಕುವ ಎಲ್ಲ ಭರವಸೆ ಕಳೆದುಹೋದ ನಂತರ ಮಹಿಳೆ ಗಂಡು ಮಗು ದತ್ತು ಪಡೆದುಕೊಂಡಿದ್ದಳು.

ABOUT THE AUTHOR

...view details