ದುಬೈ ಅಂದಾಕ್ಷಣ ನಮಗೆ ತಟ್ಟನೆ ನೆನಪಾಗೋದು ಅಲ್ಲಿನ ಬಹು ಸುಂದರ ಕಟ್ಟಡ, ಸ್ವಚ್ಛವಾಗಿ ಕಾಣುವ ರಸ್ತೆ. ಸಾಮಾನ್ಯವಾಗಿ ಪ್ರತಿ ಪ್ರಯಾಣಿಕರ ಪಟ್ಟಿಯಲ್ಲಿಯೂ ಇದಕ್ಕೆ ಅಗ್ರಸ್ಥಾನವಿದೆ. ನಗರದ ಅದ್ಭುತ ನೋಟಗಳನ್ನು ಹೆಚ್ಚಿಸಲು ಇಲ್ಲಿನ ಅತ್ಯುತ್ತಮ ವಾಸ್ತುಶಿಲ್ಪ ಕಟ್ಟಡಗಳು ಪ್ರಮುಖ ಪಾತ್ರವಹಿಸುತ್ತವೆ. ಅವು ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಹಾಗಾದ್ರೆ, ನೀವೂ ದುಬೈ ನೋಡ್ಬೇಕಾ? ಅಲ್ಲಿಗೆ ಹೋಗುವಾಗ ಒಂದಷ್ಟು ಕಟ್ಟಡಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಬುರ್ಜ್ ಖಲೀಫಾ
168 ಮಹಡಿಗಳೊಂದಿಗೆ 828 ಮೀ. ಗಿಂತ ಹೆಚ್ಚು ಎತ್ತರದಲ್ಲಿರುವ ಈ ಕಟ್ಟಡ ವಿಶ್ವದ ಅತಿ ಎತ್ತರದ ಗೋಪುರ. ಪ್ರಾದೇಶಿಕ ಮರುಭೂಮಿ ಹೂವಾದ ಹೈಮೆನೊಕಾಲಿಸ್ ಅಥವಾ ಸ್ಪೈಡರ್ ಲಿಲ್ಲಿಯನ್ನು ಹೋಲುವಂತೆ ಇದನ್ನು ಅಮೆರಿಕದ ವಾಸ್ತುಶಿಲ್ಪಿ ಆಡ್ರಿಯನ್ ಸ್ಮಿತ್ ಸ್ಕಿಡ್‌ಮೋರ್, ಓವಿಂಗ್ಸ್ ಮತ್ತು ಮೆರಿಲ್ ವಿನ್ಯಾಸಗೊಳಿಸಿದ್ದಾರೆ. ವಿಶ್ವದ ಅತಿ ಎತ್ತರದ ಹೊರಾಂಗಣ ವೀಕ್ಷಣಾಲಯವಾದ "ಟಾಪ್ ಬುರ್ಜ್ ಖಲೀಫಾ SKY"ನಲ್ಲಿ ವೀಕ್ಷಣಾ ಡೆಕ್‌ಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.
ಜೆಡಬ್ಲ್ಯೂ ಮ್ಯಾರಿಯಟ್ ಮಾರ್ಕ್ವಿಸ್
ಜೆಡಬ್ಲ್ಯೂ ಮ್ಯಾರಿಯಟ್ ಮಾರ್ಕ್ವಿಸ್‌ನ ಎರಡು ಗೋಪುರಗಳು ವಿಶ್ವದ ಅತಿ ಎತ್ತರದ ಪಂಚತಾರಾ ಹೋಟೆಲ್‌ಗಳಾಗಿವೆ. ದುಬೈನ ಡೌನ್ಟೌನ್ ಜಿಲ್ಲೆಯ ಹೃದಯಭಾಗದಲ್ಲಿರುವ ಈ ಐಷಾರಾಮಿ ಹೋಟೆಲ್ ವಿನ್ಯಾಸವು ಖರ್ಜೂರದ ಮರದಿಂದ ಪ್ರೇರಿತವಾಗಿದೆ.
ಅರೇಬಿಯನ್ ಸಮುದ್ರ ಮತ್ತು ದುಬೈ ನಗರ ದೃಶ್ಯ ವಿಸ್ಮಯಕಾರಿ ನೋಟಗಳನ್ನು ಇದು ಹೊಂದಿದೆ. ಈ ಆಸ್ತಿಯು 1,608 ಅತಿಥಿ ಕೊಠಡಿಗಳು ಮತ್ತು ಸೂಟ್‌ಗಳು, ಐಷಾರಾಮಿ ಸಾರೇ ಸ್ಪಾ ಮತ್ತು 15 ಕ್ಕೂ ಹೆಚ್ಚು ಪ್ರಶಸ್ತಿ ವಿಜೇತ ರೆಸ್ಟೋರೆಂಟ್‌ಗಳನ್ನು ಹೊಂದಿದೆ.
ಕಯಾನ್ ಗೋಪುರ
ಕಯಾನ್ ಟವರ್ ವಾಸ್ತುಶಿಲ್ಪದ ಬಗ್ಗೆ ಮೆಚ್ಚುಗೆ ಹೊಂದಿರುವವರು ಇದರ ವಾಸ್ತುಶಿಲ್ಪವನ್ನು ಒಮ್ಮೆ ನೋಡಲೇಬೇಕು. ಬುರ್ಜ್ ಖಲೀಫಾವನ್ನು ನಿರ್ಮಿಸಿರುವ ವಾಸ್ತುಶಿಲ್ಪ ಸಂಸ್ಥೆಯೇ ಇದನ್ನು ವಿನ್ಯಾಸಗೊಳಿಸಿದೆ. ಮಿನುಗುವ ಬೆಳ್ಳಿಯ ಕಯಾನ್ ಗೋಪುರವು 90 ಡಿಗ್ರಿಯಂತೆ ನೇರವಾಗಿದೆ. ಪ್ರತಿ 75 ಮಹಡಿಗಳನ್ನು 1.2 ಡಿಗ್ರಿಗಳಷ್ಟು ತಿರುಗಿಸಿ ಹೆಲಿಕ್ಸ್ ಆಕಾರವನ್ನು ರಚಿಸಲಾಗಿದೆ.