ಕರ್ನಾಟಕ

karnataka

ETV Bharat / international

'ನುಡಿದಂತೆ ನಡೆಯಿರಿ': ನಿಶ್ಯಸ್ತ್ರೀಕರಣ ಅನುಷ್ಠಾನಗೊಳಿಸುವಂತೆ ಉ.ಕೊರಿಯಾಗೆ ದ.ಕೊರಿಯಾ, ಅಮೆರಿಕಾ ಒತ್ತಾಯ

2018ರಲ್ಲಿ, ಕೊರಿಯಾದ ಉಭಯ ನಾಯಕರು ತಮ್ಮ ಗಡಿಯಲ್ಲಿ ಪರಸ್ಪರರ ವಿರುದ್ಧದ ಯಾವುದೇ ಕೃತ್ಯಗಳನ್ನು ಮಾಡುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರೊಂದಿಗೆ ನಡೆಸಿದ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್, ಕೊರಿಯಾ ಪರ್ಯಾಯ ದ್ವೀಪವನ್ನು ಸಂಪೂರ್ಣ ನಿಶ್ಯಸ್ತ್ರೀಕರಣಗೊಳಿಸುವುದಾಗಿ ತಿಳಿಸಿದ್ದರು. ಇದರ ಪ್ರಕಾರ ಉತ್ತರ ಕೊರಿಯಾವು ನಿಶ್ಯಸ್ತ್ರೀಕರಣ ಅನುಷ್ಠಾನಗೊಳಿಸಬೇಕು ಎಂದು ದಕ್ಷಿಣ ಕೊರಿಯಾ ಹಾಗೂ ಅಮೆರಿಕಾ ಒತ್ತಾಯಿಸಿದೆ.

Korea
ಕೊರಿಯಾ

By

Published : Jun 25, 2020, 5:32 PM IST

ಸಿಯೋಲ್​: ಈ ಹಿಂದಿನ ಮಾತುಕತೆಯ ಪ್ರಕಾರ ಉತ್ತರ ಕೊರಿಯಾವು ನಿಶ್ಯಸ್ತ್ರೀಕರಣ ಅನುಷ್ಠಾನಗೊಳಿಸಬೇಕು ಎಂದು ದಕ್ಷಿಣ ಕೊರಿಯಾ ಹಾಗೂ ಅಮೆರಿಕಾ ಒತ್ತಾಯಿಸಿದೆ.

2018ರ ಉದ್ವಿಗ್ನತೆ ನಿವಾರಣೆ ಒಪ್ಪಂದಗಳನ್ನು ರದ್ದುಗೊಳಿಸುವ ಕ್ರಮಗಳನ್ನು ಸ್ಥಗಿತಗೊಳಿಸುವುದುದಾಗಿ ಉತ್ತರ ಕೊರಿಯಾ ಘೋಷಿಸಿದ್ದು, ಇದು ಕೊರಿಯಾ ಪರ್ಯಾಯ ದ್ವೀಪದಲ್ಲಿ ಮತ್ತಷ್ಟು ದ್ವೇಷವನ್ನು ಹುಟ್ಟುಹಾಕಲು ಕಾರಣವಾಯಿತು. ಉತ್ತರ ಕೊರಿಯಾದ ಈ ನಿರ್ಧಾರವನ್ನು ವಿರೋಧಿಸಿ, ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಜಿಯಾಂಗ್ ಕಿಯೊಂಗ್-ಡೂ ಮತ್ತು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್, ನಿಶ್ಯಸ್ತ್ರೀಕರಣ ಅನುಷ್ಠಾನಗೊಳಿಸಬೇಕೆಂದು ಜಂಟಿ ಹೇಳಿಕೆ ನೀಡಿದ್ದಾರೆ.

2018ರ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಅಮೆರಿಕಾ-ಉತ್ತರ ಕೊರಿಯಾ ಶೃಂಗಸಭೆ ಹಾಗೂ 2018ರ ಸೆಪ್ಟೆಂಬರ್​ನಲ್ಲಿ ದಕ್ಷಿಣ - ಉತ್ತರ ಕೊರಿಯಾ ದೇಶಗಳ ನಡುವೆ ನಡೆದ ಮಾತುಕತೆಗಳ ಪ್ರಕಾರ ಉತ್ತರ ಕೊರಿಯಾ ನಡೆದುಕೊಳ್ಳಬೇಕು ಎಂದು ಜಿಯಾಂಗ್ ಮತ್ತು ಎಸ್ಪರ್ ಆಗ್ರಹಿಸಿದ್ದಾರೆ.

2018ರಲ್ಲಿ, ಕೊರಿಯಾದ ಉಭಯ ನಾಯಕರು ತಮ್ಮ ಗಡಿಯಲ್ಲಿ ಪರಸ್ಪರರ ವಿರುದ್ಧದ ಯಾವುದೇ ಕೃತ್ಯಗಳನ್ನು ಮಾಡುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರೊಂದಿಗೆ ನಡೆಸಿದ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್, ಕೊರಿಯಾ ಪರ್ಯಾಯ ದ್ವೀಪವನ್ನು ಸಂಪೂರ್ಣ ನಿಶ್ಯಸ್ತ್ರೀಕರಣಗೊಳಿಸುವುದಾಗಿ ತಿಳಿಸಿದ್ದರು.

ಕೆಲ ದಿನಗಳಿಂದ ದಕ್ಷಿಣ ಕೊರಿಯಾದೊಂದಿಗಿನ ಎಲ್ಲಾ ಸಂಪರ್ಕ ಮಾರ್ಗಗಳನ್ನು ಉತ್ತರ ಕೊರಿಯಾ ಕಡಿತಗೊಳಿಸಿದ್ದಲ್ಲದೇ, ಸಂಪರ್ಕ ಕಚೇರಿಯನ್ನು ನಾಶಪಡಿಸಿಪಡಿಸಿತ್ತು. ಈ ಬಳಿಕ ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನ ಪರಿಸ್ಥಿತಿ ಉಲ್ಬಣಗೊಂಡಿತ್ತು. ಇದನ್ನು ಅಮೆರಿಕಾ ಖಂಡಿಸಿದ್ದ ಅಮೆರಿಕಾ, ಎರಡೂ ದೇಶಗಳ ನಡುವಿನ ಸಮಸ್ಯೆ ಬಗೆಹರಿಸಲು ನಾವು ಸಿದ್ದ ಎಂದು ಹೇಳಿತ್ತು. ಆದರೆ ಅಮೆರಿಕಾದ ಮಧ್ಯಸ್ಥಿಕೆಯನ್ನು ತಳ್ಳಿ ಹಾಕಿರುವ ಉತ್ತರ ಕೊರಿಯಾ, ನವೆಂಬರ್​​​ನಲ್ಲಿ ಅಧ್ಯಕ್ಷೀಯ ಚುನಾವಣೆನ್ನು ಸುಗಮವಾಗಿ ನಡೆಸಬೇಕೆಂಬ ಉದ್ದೇಶ ನಿಮ್ಮಲ್ಲಿದ್ದರೆ ಕೊರಿಯಾ ದೇಶಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತಲೆಹಾಕಬೇಡಿ. ಆಂತರಿಕ ವ್ಯವಹಾರಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆ ಹೆಜ್ಜೆ ಇಡಿ. ಒಂದು ವೇಳೆ ಮೂಗು ತೂರಿಸಿದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಅಲ್ಲದೇ ಇದೀಗ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್​​​ - ಉನ್, ದಕ್ಷಿಣ ಕೊರಿಯಾ ವಿರುದ್ಧದ ಮಿಲಿಟರಿ ಕ್ರಿಯಾ ಯೋಜನೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ABOUT THE AUTHOR

...view details