ಕರ್ನಾಟಕ

karnataka

ETV Bharat / international

ಚೀನಾದ ಚಿನ್ನದ ಗಣಿಯಲ್ಲಿ ಬೆಂಕಿ, ಆರು ಮಂದಿ ದುರ್ಮರಣ - ಕೋಜಿಯಾವಾ ಚಿನ್ನದ ಗಣಿ ದುರಂತ

ನೆರೆಯ ಚೀನಾದ ಚಿನ್ನದಗಣಿಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ, ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.

Six killed in east China gold mine fire
ಚೀನಾದ ಚಿನ್ನದ ಗಣಿಯಲ್ಲಿ ಬೆಂಕಿ, ಆರು ಮಂದಿ ದುರ್ಮರಣ

By

Published : Feb 17, 2021, 7:56 PM IST

ಬೀಜಿಂಗ್​ (ಚೀನಾ): ಚಿನ್ನದ ಗಣಿಯಲ್ಲಿ ಅಗ್ನಿ ಅನಾಹುತ ನಡೆದಿದ್ದು, ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಗಳು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 6ಗಂಟೆ ಸುಮಾರಿಗೆ ಕಾರ್ಮಿಕರು ಜೋವಾಯೋವಾನ್ ನಗರದಲ್ಲಿರುವ ಕೋಜಿಯಾವಾ ಚಿನ್ನದ ಗಣಿಯಲ್ಲಿ ಸಲಕರಣೆಗಳ ಪರಿಶೀಲನೆ ನಡೆಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಜೋವಾಯೋವಾನ್ ಮುನ್ಸಿಪಲ್ ತಿಳಿಸಿದೆ.

ಇದನ್ನೂ ಓದಿ:ವಿಷಕಾರಿ ಮದ್ಯ ಸೇವನೆ: ಬಿಹಾರದಲ್ಲಿ ಇಬ್ಬರು ಕಾರ್ಮಿಕರ ಸಾವು

ಹತ್ತು ಮಂದಿ ಬೆಂಕಿಯಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿ ನಾಲ್ವರನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆದ ನಂತರ ಚಿನ್ನದ ಗಣಿಯಿಂದ ಸುಮಾರು 200 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ABOUT THE AUTHOR

...view details