ಇಸ್ಲಾಮಾಬಾದ್(ಪಾಕಿಸ್ತಾನ):ಪಾಕಿಸ್ತಾನದ ರಾಜಕೀಯದಲ್ಲಿ ಏರಿಳಿತಗಳು ತೀವ್ರವಾಗಿವೆ. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳ ಮಂಡಿಸಿರುವ ಅವಿಶ್ವಾಸ ನಿರ್ಣಯವು ಮಾರ್ಚ್ 28ರಂದು ಸಂಸತ್ತಿನ ಮುಂದೆ ಬರುವ ಸಾಧ್ಯತೆಯಿದ್ದು, ಪ್ರತಿಪಕ್ಷದ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಇಮ್ರಾನ್ ಖಾನ್ಗೆ ಸವಾಲು ಹಾಕಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತವಿದೆ ಎಂದು ಸಾಬೀತುಪಡಿಸಲಿ ಇಲ್ಲದೇ ಇದ್ದಲ್ಲಿ ಮನೆಗೆ ಹೋಗಲಿ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸವಾಲು ಹಾಕಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ನ ಪಾಕಿಸ್ತಾನ ವರದಿಗಾರರು ಮಾಹಿತಿ ನೀಡಿದ್ದಾರೆ.
'ಇಂಥಹ ಸಮಯದಲ್ಲಿ ನೀವು ಬಾಲ್ ಟ್ಯಾಂಪರಿಂಗ್ ಮಾಡಬೇಡಿ, 172 ಮತಗಳನ್ನು ತೋರಿಸಿ ಇಲ್ಲವೆ ಮನೆಗೆ ಹಿಂತಿರುಗಿ' ಎಂದು ಜರ್ದಾರಿ ಹೇಳಿದ್ದು, ನಮ್ಮ ಮೇಲೆ ನಡೆಸಿದ ದಾಳಿಯಿಂದಾಗಿ ನಾವು ಹೆದರುವುದಿಲ್ಲ ಎಂದು ಜರ್ದಾರಿ ಗುಡುಗಿದ್ದಾರೆ.