ಕೊಲಂಬೋ: ಶ್ರೀಲಂಕಾದಿಂದ ಭಾರತದತ್ತ ಸಾಗುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಮತ್ತು ಬಂದರು ಕಾರ್ಮಿಕರು ಆತಂಕಕ್ಕೊಳಗಾದ್ದರು.
ಶ್ರೀಲಂಕಾ ಬಂದರು ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಭಾರತೀಯ ಹಡಗಿನಲ್ಲಿ ಅಗ್ನಿ ಅವಘಡ - ಶ್ರೀಲಂಕಾ ಬಂದರು
ಭಾರತಕ್ಕೆ ಬೃಹತ್ ಪ್ರಮಾಣದಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ 'ಎಂಟಿ ನ್ಯೂ ಡೈಮಂಡ್' ಹೆಸರಿನ ಭಾರತೀಯ ಹಡಗಿನಲ್ಲಿ ಶುಕ್ರವಾರ ತಡರಾತ್ರಿ ಶ್ರೀಲಂಕಾ ಬಂದರು ಬಳಿ ಬೆಂಕಿ ಕಾಣಿಸಿಕೊಂಡಿದೆ.
ಭಾರತೀಯ ಹಡಗಿನಲ್ಲಿ ಅಗ್ನಿ ಅವಘಡ
ಭಾರತಕ್ಕೆ ಬೃಹತ್ ಪ್ರಮಾಣದಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ 'ಎಂಟಿ ನ್ಯೂ ಡೈಮಂಡ್' ಹೆಸರಿನ ಭಾರತೀಯ ಹಡಗಿನಲ್ಲಿ ಶುಕ್ರವಾರ ತಡರಾತ್ರಿ ಶ್ರೀಲಂಕಾ ಬಂದರು ಬಳಿ ಬೆಂಕಿ ಹತ್ತಿಕೊಂಡಿದೆ. ಹಡಗಿನಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಕೋಸ್ಟ್ ಗಾರ್ಡ್ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಇತರ ದೇಶಗಳ ಹಡಗುಗಳೂ ಸಹ ಬೆಂಕಿ ನಂದಿಸಲು ಬಂದಿದ್ದು, ಕೊನೆಗೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆ ತಿಳಿಸಿದ್ದು, ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
Last Updated : Sep 5, 2020, 11:19 AM IST