ಇಸ್ಲಾಮಾಬಾದ್ (ಪಾಕಿಸ್ತಾನ):ಪ್ರಸ್ತುತ ಲಂಡನ್ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅವರು ಈಗಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಮಾಡಿದ ಉಗ್ರ ಭಾಷಣದ ನಂತರ ಮತ್ತು ಮಿಲಿಟರಿ ಸಂಸ್ಥೆಗಳ ಕುರಿತು ಅವರು ಟೀಕಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ನಾಲ್ಕು ಸ್ಥಳೀಯ ಅಂಗರಕ್ಷಕರು ಸ್ಟ್ಯಾನ್ಹೋಪ್ ಹೌಸ್ನಲ್ಲಿರುವ ಹಸನ್ ನವಾಜ್ ಅವರ ಕಚೇರಿಯನ್ನು ತಲುಪಿದ್ದಾರೆಂದು ವರದಿಯಾಗಿದೆ.
ಅಲ್ಲಿಂದ ಅವರು ಗುಜ್ರಾನ್ವಾಲಾದಲ್ಲಿ ನಡೆದ ಪಾಕಿಸ್ತಾನ ಪ್ರಜಾಸತ್ತಾತ್ಮಕ ಚಳವಳಿಯ (ಪಿಡಿಎಂ) ರ್ಯಾಲಿಯನ್ನುದ್ದೇಶಿಸಿ ವಿಡಿಯೋ ಲಿಂಕ್ ಮೂಲಕ ಮಾತನಾಡಿದರು.
ಅಂಗರಕ್ಷಕರನ್ನು ದಿನವಿಡೀ ಕಚೇರಿಯ ಹತ್ತಿರ ನಿಲ್ಲಿಸಲಾಗಿತ್ತು ಎಂದು ವರದಿ ತಿಳಿಸಿದೆ.