ETV Bharat Karnataka

ಕರ್ನಾಟಕ

karnataka

ETV Bharat / international

Avalanche : ಜನವಸತಿ ಪ್ರದೇಶದ ಮೇಲೆ ಹಿಮಕುಸಿತ.. 7 ಶಾಲಾ ಮಕ್ಕಳು ಸೇರಿ 11 ಮಂದಿಗೆ ಗಾಯ - ಹಿಮಪಾತ

ನೇಪಾಳದ ಮುಸ್ತಾಂಗ್‌ನಲ್ಲಿ ಜನವಸತಿ ಪ್ರದೇಶದಲ್ಲಿ ಹಿಮಕುಸಿತವಾಗಿದ್ದು, ಏಳು ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ..

ಜನವಸತಿ ಪ್ರದೇಶದ ಮೇಲೆ ಹಿಮಕುಸಿತ
ಜನವಸತಿ ಪ್ರದೇಶದ ಮೇಲೆ ಹಿಮಕುಸಿತ
author img

By

Published : Nov 14, 2021, 8:00 PM IST

ಕಠ್ಮಂಡು(ನೇಪಾಳ) :ಜನವಸತಿ ಪ್ರದೇಶದಲ್ಲಿ ಹಿಮಕುಸಿತ (avalanche) ಉಂಟಾಗಿ ಏಳು ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಗಾಯಗೊಂಡಿರುವ ಘಟನೆ ನೇಪಾಳದ ಮುಸ್ತಾಂಗ್‌ನಲ್ಲಿ ( Nepal's Mustang) ನಡೆದಿದೆ.

ಮುಸ್ತಾಂಗ್‌ನ ವಸತಿ ಪ್ರದೇಶವನ್ನು ಆವರಿಸಿದ್ದ ತುಕುಚೆ ಪರ್ವತದಿಂದ (Tukuche Mountain) ಹಿಮಪಾತವಾಗಿದೆ. ಸಮೀಪವಿದ್ದ ಅಮರಸಿಂಗ್ ಪ್ರೌಢಶಾಲೆಯ (Amarsingh High School) ಮಕ್ಕಳು ಹಾಗೂ ಸ್ಥಳೀಯರು ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Somalia Food Insecurity : 2022ರ ಮೇ ವೇಳೆಗೆ ಸೋಮಾಲಿಯಾದಲ್ಲಿ 'ಆಹಾರ ಅಭದ್ರತೆ' ಇನ್ನಷ್ಟು ಹದಗೆಡಲಿದೆ : ವಿಶ್ವಸಂಸ್ಥೆ ಎಚ್ಚರಿಕೆ

30 ನಿಮಿಷಗಳ ಕಾಲ ಹಿಮ ಕುಸಿತವಾಗಿದೆ. ಈ ವೇಳೆ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದವು. ಹಿಮ ಬೀಳಲು ಪ್ರಾರಂಭಿಸಿದ ತಕ್ಷಣವೇ ವಿದ್ಯಾರ್ಥಿಗಳು ಶಾಲೆಯಿಂದ ಓಡಿ ಹೋದರು.

ಎಲ್ಲಾ ವಿದ್ಯಾರ್ಥಿಗಳನ್ನು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹಿಮ ಕುಸಿತವಾದ ಪ್ರದೇಶವು ಹೆಚ್ಚು ಹುಲ್ಲುಗಾವಲು ಇದ್ದ ಪ್ರದೇಶವಾಗಿದ್ದು, ಜಾನುವಾರುಗಳ ಮೇಲೆ ಪರಿಣಾಮ ಬೀರಿದೆ.

ABOUT THE AUTHOR

author-img

...view details