ಸಿಂಧುಪಾಲ್ಚೌಕ್:ನೇಪಾಳದ ಪರ್ವತ ಪ್ರದೇಶಗಳ ಮೂರು ಹಳ್ಳಿಗಳಲ್ಲಿ ಭೂಕುಸಿತ ಸಂಭವಿಸಿದ್ದು, ನಾಪತ್ತೆಯಾದವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ.
ನೇಪಾಳ ಭೂಕುಸಿತ; ನಾಪತ್ತೆಯಾದವರಿಗಾಗಿ ಹುಡುಕಾಟ ಮತ್ತೆ ಆರಂಭ - ನೇಪಾಳ ಭೂಕುಸಿತ
ನೇಪಾಳದ ಪರ್ವತ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ನೇಪಾಳ ಭೂಕುಸಿತ
ಇಲ್ಲಿಯವರೆಗೆ ಮಣ್ಣಿನಡಿ ಹೂತುಹೋಗಿದ್ದ 11 ಶವಗಳನ್ನು ಮೇಲೆತ್ತಲಾಗಿದೆ. ಭೂಕುಸಿತದಿಂದಾಗಿ ಮತ್ತೂ 15 ಜನ ಜೀವಂತ ಸಮಾಧಿಯಾಗಿರುವ ಸಾಧ್ಯತೆ ಇದ್ದು, ಅವರಿಗಾಗಿ ಪೊಲೀಸರು ಹಾಗೂ ರಕ್ಷಣಾ ತಂಡ ಗ್ರಾಮಸ್ಥರ ನೆರವಿನೊಂದಿಗೆ ಶೋಧ ನಡೆಸುತ್ತಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ನೇಪಾಳದಲ್ಲಿ ಭೂಕುಸಿತ ಸಾಮಾನ್ಯವಾಗಿದೆ. ಸೆಪ್ಟೆಂಬರ್ ವೇಳೆಗೆ ಮಳೆಯ ಆರ್ಭಟ ಭಾಗಶಃ ನಿಲ್ಲಲಿದ್ದು, ಆ ಬಳಿಕ ಭೂಕುಸಿತ ಕಡಿಮೆಯಾಗಲಿದೆ.