ಕರ್ನಾಟಕ

karnataka

ETV Bharat / international

ಮೆಕ್ಕಾದ ಗ್ರ್ಯಾಂಡ್ ಮಸೀದಿ ಹೊರಗಿನ ಗೇಟ್​ಗೆ ಶರವೇಗದಲ್ಲಿ ಬಂದ ಕಾರು ಡಿಕ್ಕಿ - ಕಾರು ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಹೊರಗಿನ ಗೇಟ್​ಗೆ ಡಿಕ್ಕಿ

ಮೆಕ್ಕಾದ ಮಸೀದಿಯ ಹೊರಗಿನ ಗೇಟ್​ಗೆ ಕಾರೊಂದು ಬಂದು ಡಿಕ್ಕಿ ಹೊಡೆದಿದೆ.

ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಹೊರಗಿನ ಗೇಟ್​ಗೆ ಶರವೇಗದಲ್ಲಿ ಬಂದ ಕಾರು ಡಿಕ್ಕಿ
ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಹೊರಗಿನ ಗೇಟ್​ಗೆ ಶರವೇಗದಲ್ಲಿ ಬಂದ ಕಾರು ಡಿಕ್ಕಿ

By

Published : Oct 31, 2020, 4:31 PM IST

Updated : Oct 31, 2020, 5:45 PM IST

ದುಬೈ:ವ್ಯಕ್ತಿಯೋರ್ವ ವೇಗವಾಗಿ ಕಾರನ್ನು ಚಲಿಸುತ್ತ ಬಂದು, ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಹೊರಗಿನ ಗೇಟ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೇಶದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾತ್ರಿ 10:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು, ಗ್ರ್ಯಾಂಡ್ ಮಸೀದಿಯ ದಕ್ಷಿಣ ಭಾಗದಲ್ಲಿರುವ ಗೇಟ್​ಗೆ ಕೂಡ ಡಿಕ್ಕಿ ಹೊಡೆದಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.

ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸದ್ದು ಮಾಡುತ್ತಿದೆ. ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಗ್ರ್ಯಾಂಡ್​ ಮಸೀದಿಯನ್ನ ಮುಚ್ಚಲಾಗಿತ್ತು. ಇದೀಗ ಮಸೀದಿಯನ್ನ ತೆರೆಯಲಾಗಿದ್ದು, ದಿನಕ್ಕೆ ಐದು ಎಂದಿನಂತೆ ನವಾಜ್​ ನಡೆಸಲಾಗುತ್ತಿದೆ. ಟಿವಿ ಸ್ಯಾಟಿಲೈಟ್​ ದೃಶ್ಯಗಳಲ್ಲಿ ಈ ಕಾರು ಅಪಘಾತಕ್ಕೀಡಾಗುವ ಮುನ್ನ ಹಾಗೂ ನಂತರ ಮಸೀದಿ ಆವರಣದೊಳಗೆ ಜನರು ಸೇರಿದ್ದು ಕಂಡು ಬಂದಿದೆ.

Last Updated : Oct 31, 2020, 5:45 PM IST

For All Latest Updates

ABOUT THE AUTHOR

...view details