ಕರ್ನಾಟಕ

karnataka

ETV Bharat / international

ಸೌದಿ ಅರೇಬಿಯಾದಿಂದ ಭಾರತಕ್ಕೆ ದೀಪಾವಳಿ ಗಿಫ್ಟ್‌: ಪಾಕ್​​ ಮ್ಯಾಪ್​ನಿಂದ ಪಿಒಕೆ ಔಟ್​ - ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇತ್ತೀಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ನೂತನ ಮ್ಯಾಪ್ ಅನಾವರಣಗೊಳಿಸಿದ್ದು, ಅದರಲ್ಲಿ ಭಾರತದ ಭೂಪ್ರದೇಶಗಳಾದ ಜುನಾ​ಗಢ್, ಸರ್​​ ಕ್ರೀಕ್, ಗುಜರಾತ್​ನ ಮಾನವಾಡರ್​​​​​ ಮತ್ತು ಜಮ್ಮಕಾಶ್ಮೀರದ ಲಡಾಖ್ ಪಾಕ್​​ನ ಭಾಗ ಎಂದು ಹೇಳಿಕೊಂಡಿದ್ದರು. ಮಾಧ್ಯಮಗಳ ವರದಿಯ ಪ್ರಕಾರ, ಸೌದಿಯೂ ನವೆಂಬರ್ 21-22ರಂದು ನಡೆಯಲಿರುವ ಜಿ-20 ಶೃಂಗಸಭೆಯ ನೆನಪಿಗಾಗಿ 20 ರಿಯಾಲ್ ನೋಟುಗಳನ್ನು ಮುದ್ರಿಸಲಿದ್ದು ನೋಟಿನ ಮೇಲೆ ಅಚ್ಚಾಗುವ ವಿಶ್ವದ ನಕ್ಷೆಯಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಭಾಗಗಳಾಗಿ ತೋರಿಸುವುದಿಲ್ಲ ಎಂದು ವರದಿಯಾಗಿದೆ.

saudi-arabia-removes-pok-gilgit-baltistan-from-map-of-pakistan
ಸೌದಿ ಅರೇಬಿಯಾದಿಂದ ಭಾರತಕ್ಕೆ ದೀಪಾವಳಿ ಕೊಡುಗೆ

By

Published : Oct 28, 2020, 3:48 PM IST

Updated : Oct 28, 2020, 4:09 PM IST

ಲಂಡನ್​: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನವನ್ನು ಪಾಕಿಸ್ತಾನದ ನಕ್ಷೆಯಿಂದ ಸೌದಿ ಅರೇಬಿಯಾ ತೆಗೆದುಹಾಕಲಿದೆ ಎಂದು ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸೌದಿ ಅರೇಬಿಯಾ ಭಾರತಕ್ಕೆ ದೀಪಾವಳಿಯ ಕೊಡುಗೆಯಾಗಿ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ನಕ್ಷೆಯಿಂದ ತೆಗೆದುಹಾಕುತ್ತದೆ’ ಎಂದು ಮ್ಯಾಪ್​ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, ಸೌದಿಯೂ ನವೆಂಬರ್ 21-22ರಂದು ನಡೆಯಲಿರುವ ಜಿ-20 ಶೃಂಗಸಭೆಯ ನೆನಪಿಗಾಗಿ 20 ರಿಯಾಲ್ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ವೇಳೆ ನೋಟಿನ ಮೇಲೆ ಅಚ್ಚಾಗುವ ವಿಶ್ವದ ನಕ್ಷೆಯಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗಗಳಾಗಿ ತೋರಿಸುವುದಿಲ್ಲ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಭಾರತ ಸರ್ಕಾರವು ಪಾಕಿಸ್ತಾನಕ್ಕೆ ತೀವ್ರ ಪ್ರತಿರೋಧ ನೀಡಿತ್ತು. ಗಿಲ್ಗಿಟ್​ ಮತ್ತು ಬಾಲ್ಟಿಸ್ತಾನ್ ಎಂದು ಕರೆಯಲ್ಪಡುವ ಜಮ್ಮು ಕಾಶ್ಮೀರದ ಭಾಗಗಳು, ಲಡಾಖ್ ​​​ಭಾರತದ ಅವಿಭಾಜ್ಯ ಅಂಗ ಎಂದು ವಿದೇಶಾಂಗ ಕಾರ್ಯಾಲಯ ಸ್ಪಷ್ಟಪಡಿಸಿತ್ತು.

ಇತ್ತೀಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ನೂತನ ಮ್ಯಾಪ್ ಅನಾವರಣಗೊಳಿಸಿದ್ದು, ಅದರಲ್ಲಿ ಭಾರತದ ಭೂಪ್ರದೇಶಗಳಾದ ಜುನಾಗಢ್, ಸರ್​​ ಕ್ರೀಕ್, ಗುಜರಾತ್​ನ ಮಾನವಾಡರ್​​​​​ ಮತ್ತು ಜಮ್ಮಕಾಶ್ಮೀರದ ಲಡಾಖ್ ಪಾಕ್​​ನ ಭಾಗ ಎಂದು ಹೇಳಿಕೊಂಡಿತ್ತು.

Last Updated : Oct 28, 2020, 4:09 PM IST

ABOUT THE AUTHOR

...view details