ರಿಯಾದ್(ಸೌದಿ ಅರೇಬಿಯಾ): ಸೌದಿ ಅರೇಬಿಯಾ ರಾಜ ಸಲ್ಮಾನ್ ಇಂದು ಕೊರೊನಾ ವೈರಸ್ ಲಸಿಕೆಯ ಮೊದಲ ಚುಚ್ಚುಮದ್ದು ಪಡೆದುಕೊಂಡಿದ್ದು, ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
85 ವರ್ಷದ ಸಲ್ಮಾನ್ ಕೊರೊನಾ ವೈರಸ್ನ ಮೊದಲ ಚುಚ್ಚುಮದ್ದು ಪಡೆದುಕೊಂಡಿದ್ದಾಗಿ ಅಲ್ಲಿನ ಸುದ್ದಿವಾಹಿನಿ ಮಾಹಿತಿ ಪ್ರಕಟಿಸಿದ್ದು, ಇದಕ್ಕೆ ಅಲ್ಲಿನ ಆರೋಗ್ಯ ಇಲಾಖೆ ದನ್ಯವಾದ ತಿಳಿಸಿದೆ. ಅಮೆರಿಕದಿಂದ ಸಿದ್ದಗೊಂಡಿರುವ ಫೈಜರ್ ಚುಚ್ಚುಮದ್ದು ಸೌದಿ ಅರೇಬಿಯಾದಲ್ಲಿ ನೀಡಲಾಗುತ್ತಿದೆ.