ಕರ್ನಾಟಕ

karnataka

ETV Bharat / international

ಅಪ್ರಾಪ್ತರಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಸೌದಿ... ನಿಟ್ಟುಸಿರು ಬಿಟ್ಟ ಅಪರಾಧಿಗಳು - ಅಪ್ರಾಪ್ತ ಅಪರಾಧಿಗಳಿಗೂ ಮರಣ ದಂಡನೆ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ಈ ಹಿಂದೆ ಅಪ್ರಾಪ್ತ ಅಪರಾಧಿಗಳಿಗೂ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಗಲ್ಲು ಶಿಕ್ಷೆ ಬದಲಾಗಿ ಜೈಲು ಶಿಕ್ಷೆ ನೀಡುವುದಾಗಿ ಪ್ರಕಟಿಸಿದೆ.

Saudi Arabia
ಸೌದಿ

By

Published : Apr 27, 2020, 2:16 PM IST

ದುಬೈ(ಸೌದಿ ಅರೇಬಿಯ):ಅಪ್ರಾಪ್ತ ವಯಸ್ಕರಿಗೆ ಮರಣದಂಡನೆ ವಿಧಿಸುವುದನ್ನು ಸೌದಿ ಅರೇಬಿಯಾ ನಿಲ್ಲಿಸಿದೆ.

ಅಪ್ರಾಪ್ತ ವಯಸ್ಕರಾಗಿದ್ದಾಗ ಮಾಡಿದ ಅಪರಾಧಗಳಿಗೂ ಸೌದಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತಿತ್ತು. ಸದ್ಯ ಅದನ್ನು ರದ್ದು ಮಾಡಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಅವದ್ ಅಲಾವದ್ ಹೇಳಿದ್ದು, ಮರಣ ದಂಡನೆ ಬದಲಾಗಿ ಬಾಲಾಪರಾಧಿಗೆ 10 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ." ಎಂದು ತಿಳಿಸಿದ್ದಾರೆ.

ಈಗಾಗಲೇ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಲ್ಪಸಂಖ್ಯಾತ ಶಿಯಾ ಸಮುದಾಯದ ಕನಿಷ್ಠ ಆರು ಅಪ್ರಾಪ್ತರ ಪ್ರಾಣವನ್ನು ಈ ತೀರ್ಪು ಉಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಇದೇ ವೇಳೆ ಅಭಿಪ್ರಾಯ ವ್ಯಕ್ತವಾಗಿದೆ.

ಅರಬ್ ದಂಗೆಯ ಸಮಯದಲ್ಲಿ ಈ ಆರು ಆರೋಪಿಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು.

ಈ ಕೃತ್ಯದ ಆಧಾರವಾಗಿ ಅಪ್ರಾಪ್ತರಿಗೆ ಮರಣ ದಂಡನೆ ಶಿಕ್ಷೆಯನ್ನು ನೀಡದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಕಳೆದ ವರ್ಷ ಸೌದಿ ಅರೇಬಿಯಾಕ್ಕೆ ತುರ್ತು ಮನವಿ ಮಾಡಿದ್ದರು.

ಭಯೋತ್ಪಾದನೆ, ಹತ್ಯೆ, ಅತ್ಯಾಚಾರ, ಸಶಸ್ತ್ರ ದರೋಡೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ದೇಶದಲ್ಲಿ ಇದುವರೆಗೆ ಅತೀ ಹೆಚ್ಚು ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇದರಿಂದಾಗಿ ವಿಶ್ವದಲ್ಲಿಯೇ ಅತಿ ಹೆಚ್ಚು ಮರಣದಂಡನೆ ಪ್ರಮಾಣವನ್ನು ಸೌದಿ ದೇಶ ಹೊಂದಿದೆ.

ABOUT THE AUTHOR

...view details