ಕಾಬೂಲ್ (ಅಫ್ಘಾನಿಸ್ತಾನ): ಆಫ್ಘನ್ನ ನೂತನ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಆಕ್ಷೇಪ ವ್ಯಕ್ತಪಡಿಸಿದೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪ್ರಕಾರ, ಕಳೆದ ವರ್ಷ ಫೆಬ್ರವರಿಯಲ್ಲಿ ತಾಲಿಬಾನ್- ಅಮೆರಿಕ ನಡುವೆ ಆದ ದೋಹಾ ಒಪ್ಪಂದವನ್ನು ಉಲ್ಲಂಘಿಸಿ ಮುಂದುವರಿದ ನಿರ್ಬಂಧಗಳ ಬಗ್ಗೆ ವಾಷಿಂಗ್ಟನ್ ಈ ನಿಲುವನ್ನು ಹೊಂದಿದೆ ಎಂದು ಅರಿಯಾನಾ ನ್ಯೂಸ್ ವರದಿ ಮಾಡಿದೆ.
ಇದು ಅಮೆರಿಕ ಅಥವಾ ಅಫ್ಘಾನಿಸ್ತಾನದ ಹಿತಾಸಕ್ತಿಗೆ ಸಂಬಂಧಿಸಿಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇಸ್ಲಾಮಿಕ್ ಎಮಿರೇಟ್‌ನ ಹಂಗಾಮಿ ಆಂತರಿಕ ಸಚಿವರಾಗಿ ನೇಮಕಗೊಂಡಿರುವ ಹಕ್ಕಾನಿ ನೆಟ್‌ವರ್ಕ್‌ನ ಸಿರಾಜುದ್ದೀನ್ ಹಕ್ಕಾನಿ ಅವರ ಬಗ್ಗೆ ಅಮೆರಿಕ ನೀಡಿರುವ ಇತ್ತೀಚಿನ ಹೇಳಿಕೆಗಳಿಗೆ ತಾಲಿಬಾನ್ ಆಕ್ಷೇಪ ವ್ಯಕ್ತಪಡಿಸಿದೆ.
ಹಕ್ಕಾನಿ ಸಾಹಿಬ್ ಕುಟುಂಬವು ಇಸ್ಲಾಮಿಕ್ ಎಮಿರೇಟ್‌ನ ಭಾಗವಾಗಿದೆ. ದೋಹಾ ಒಪ್ಪಂದದಲ್ಲಿ ಯಾವುದೇ ವಿನಾಯಿತಿ ಇಲ್ಲದೇ ಇಸ್ಲಾಮಿಕ್ ಎಮಿರೇಟ್‌ನ ಎಲ್ಲಾ ಅಧಿಕಾರಿಗಳು ಅಮೆರಿಕದ ಜೊತೆ ನಡೆದ ಸಂವಾದದ ಭಾಗವಾಗಿದ್ದರು. ಈ ಹಿನ್ನೆಲೆ ವಿಶ್ವಸಂಸ್ಥೆ ಮತ್ತು ಅಮೆರಿಕ ಹಕ್ಕಾನಿಯನ್ನು ಕಪ್ಪುಪಟ್ಟಿಯಿಂದ ತೆಗೆದುಹಾಕಬೇಕಿತ್ತು ಎಂದು ತಾಲಿಬಾನ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ತಾಲಿಬಾನಿಗಳದ್ದು ಪಕ್ಕಾ ವೃತ್ತಿಪರತೆ ಮತ್ತು ವ್ಯಾವಹಾರಿಕತೆ: ಶ್ವೇತಭವನ
ಅಮೆರಿಕ ಮತ್ತು ಇತರ ದೇಶಗಳು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ. ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಇಸ್ಲಾಮಿಕ್ ಎಮಿರೇಟ್ ಅತ್ಯಂತ ಬಲವಾಗಿ ಖಂಡಿಸುತ್ತದೆ.
ಅಮೆರಿಕ ಅಧಿಕಾರಿಗಳ ಇಂಥ ಟೀಕೆಗಳು ಹಿಂದಿನ ವಿಫಲ ಪ್ರಯೋಗಗಳ ಪುನರಾವರ್ತನೆ ಆ ದೇಶಕ್ಕೆ ಮಾರಕವಾಗಿವೆ. ಈ ತಪ್ಪು ನೀತಿಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ತಾಲಿಬಾನ್ ಒತ್ತಾಯಿಸಿದೆ.