ಸಿಯೋಲ್ :ಲಂಚ ಪ್ರಕರಣದಲ್ಲಿ ಜಾಗತಿಕ ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಸ್ಥಾನದ ಉತ್ತರಾಧಿಕಾರಿ ಲೀ ಜೇ-ಯಂಗ್ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ, ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಅವರು ಹಾಗೂ ಅವರ ವಕೀಲರು ನಿರ್ಧರಿಸಿದ್ದಾರೆ. ಇದು ದೇಶದಲ್ಲಿಯೇ ಅತಿ ಹೆಚ್ಚು ಅವಧಿಗೆ ವಿಧಿಸಿರುವ ಶಿಕ್ಷೆಯಾಗಿದೆ.
ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮತ್ತು ಮೆಮೊರಿ ಚಿಪ್ ತಯಾರಕರಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಲೀ ಜೇ-ಯಂಗ್ ಅವರು ಅಧ್ಯಕ್ಷ ಪಾರ್ಕ್ ಗಿಯುನ್-ಹೈ ಅವರನ್ನು ಕೆಳಕ್ಕಿಳಿಸಿದ ಹಗರಣಕ್ಕೆ ಸಂಬಂಧಿಸಿದಂತೆ ಲಂಚ ಮತ್ತು ಅಧಿಕಾರ ದುರುಪಯೋಗ ಅಪರಾಧಕ್ಕೆ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.
ಇದರ ಜತೆಗೆ ಸ್ಯಾಮ್‌ಸಂಗ್ ಬ್ರಾಂಚ್ಗಳ ನಡುವಿನ 2015ರ ವಿಲೀನಕ್ಕೆ ಸಂಬಂಧಿಸಿದಂತೆ ಸ್ಟಾಕ್ ಬೆಲೆ, ಲೆಕ್ಕದಲ್ಲಿ ಮೋಸ, ನಂಬಿಕೆ ದ್ರೋಹ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೀ ವಿರುದ್ಧ ಪ್ರತ್ಯೇಕ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
ಲೀ ಜೇ-ಯಂಗ್ಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ದೂರುದಾರರು ಕೋರಿದ್ದರು. ಆದರೆ, ಅವರ ಅಪರಾಧಗಳ ತೀವ್ರತೆ ಪರಿಗಣಿಸಿ ನ್ಯಾಯಾಲಯ ಎರಡೂವರೆ ವರ್ಷ ಶಿಕ್ಷೆ ವಿಧಿಸಿದೆ. ಲೀ ಅವರ ಕಾನೂನು ವಿಷಯಗಳ ಬಗ್ಗೆ ಸ್ಯಾಮ್‌ಸಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭ್ರಷ್ಟಾಚಾರ ಹಗರಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೀ, ಸ್ಯಾಮ್‌ಸಂಗ್ ಸಂಸ್ಥೆಗಾಗಿ ದುಡಿದಿದ್ದಾರೆ. ಜತೆಗೆ ಸ್ಯಾಮ್‌ಸಂಗ್ ಸಂಸ್ಥೆಯಲ್ಲಿ ವಂಶಪಾರಂಪರ್ಯದ ಅಧಿಕಾರ ಕೇಂದ್ರೀಕರಣ ಕೊನೆಗೊಳ್ಳುತ್ತದೆ. ನನ್ನ ತಂದೆಯಿಂದ ಪಡೆದ ಸಂಸ್ಥೆ ನಿರ್ವಹಣಾ ಹಕ್ಕನ್ನು ನಮ್ಮ ಮಕ್ಕಳಿಗೆ ನೀಡಲ್ಲ ಎಂದಿದ್ದಾರೆ.