ಮಾಸ್ಕೋ, ರಷ್ಯಾ :ರಾಡಾರ್ ನಿಯಂತ್ರಣದಿಂದ ತಪ್ಪಿಸಿಕೊಂಡಿದ್ದ ವಿಮಾನ ಪತ್ತೆಯಾಗಿದ್ದು, ಎಲ್ಲಾ 19 ಪ್ರಯಾಣಿಕರು ಸೇಫಾಗಿದ್ದಾರೆಂದು ರಷ್ಯಾದ ನ್ಯೂಸ್ ಏಜೆನ್ಸಿಗಳು ವರದಿ ಮಾಡಿವೆ. ಆ್ಯಂಟೋನೋವ್ ಆ್ಯನ್-28 ಎಂಬ ವಿಮಾನ ಸೈಬೀರಿಯಾದ ಟೋಮ್ಸ್ಕ್ ಪ್ರದೇಶ ಮೇಲೆ ಹಾರಾಡುವಾಗ ರಾಡಾರ್ ನಿಯಂತ್ರಣದಿಂದ ತಪ್ಪಿಸಿಕೊಂಡಿತ್ತು. ವಿಮಾನವನ್ನು ಸಂಪರ್ಕಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದ ಕಾರಣದಿಂದ ಅನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ನಾಲ್ವರು ಮಕ್ಕಳು, ಮೂವರು ಸಿಬ್ಬಂದಿ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ ಎಂದು ಎಪಿಟಿಎನ್ ವರದಿ ಮಾಡಿದೆ.
ಟೋಮ್ಸ್ಕ್ ಪ್ರದೇಶದ ಕೆಡ್ರೋವಿ ನಗರದಿಂದ ಹೊರಟ್ಟಿದ್ದ ಈ ವಿಮಾನದಲ್ಲಿ 13ರಿಂದ 17 ಪ್ರಯಾಣಿಕರು ಇದ್ದರೆಂದು ಟಿಎಎಸ್ಎಸ್ (TASS) ಮತ್ತು ರಿಯಾ (RIA) ನ್ಯೂಸ್ ಏಜೆನ್ಸಿಗಳು ವರದಿ ಮಾಡಿದ್ದು, ನಂತರ ಅಧಿಕಾರಿಗಳು ವಿಮಾನದಲ್ಲಿ 19 ಮಂದಿ ಪ್ರಯಾಣಿಕರಿದ್ದರೆಂದು ಸ್ಪಷ್ಟನೆ ನೀಡಿದ್ದಾರೆ.