ಮಾಸ್ಕೋ(ರಷ್ಯಾ) :ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಸುರಕ್ಷತೆಯನ್ನು ಖಾತರಿಪಡಿಸುವ ಭರವಸೆಯನ್ನು ತಾಲಿಬಾನ್ ನೀಡಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ (TASS) ವರದಿ ಮಾಡಿದೆ.
ತಾಲಿಬಾನ್ನ ರಾಜಕೀಯ ಕಚೇರಿಯ ವಕ್ತಾರ ಸುಹೇಲ್ ಶಾಹೀನ್ ಅವರನ್ನು ಉಲ್ಲೇಖಿಸಿರುವ ಸುದ್ದಿಸಂಸ್ಥೆ, ರಷ್ಯಾ ಮತ್ತು ಇತರ ರಾಯಭಾರ ಕಚೇರಿಗಳ ಕಾರ್ಯನಿರ್ವಹಣೆಗೆ ಸುರಕ್ಷತೆಯನ್ನು ಖಾತರಿಪಡಿಸುವ ಭರವಸೆಯನ್ನು ತಾಲಿಬಾನ್ ನೀಡಿದೆ ಎಂದು ತಿಳಿಸಿದೆ.
ಅಫ್ಘಾನಿಸ್ತಾನದ ಕ್ರೆಮ್ಲಿನ್‌ನ (ಸಂಸತ್ತು) ರಾಯಭಾರಿ ಜಮೀರ್ ಕಾಬುಲೋವ್ ಭಾನುವಾರ ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಅಫ್ಘಾನಿಸ್ತಾನದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರವಾಗಲಿದೆ: ಆಂತರಿಕ ವ್ಯವಹಾರಗಳ ಸಚಿವ
ರಷ್ಯಾದ ರಾಯಭಾರಿ ಮತ್ತು ಅದರ ಸಿಬ್ಬಂದಿ ಶಾಂತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಕಾಬುಲೋವ್ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು.