ಕರ್ನಾಟಕ

karnataka

ETV Bharat / international

ತನ್ನದೇ ಬಾಹ್ಯಾಕಾಶ ಕೇಂದ್ರ ಅಭಿವೃದ್ಧಿಪಡಿಸುತ್ತಂತೆ ರಷ್ಯಾ - ಎನರ್ಜಿಯಾ

ಹೊಸ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ರಚಿಸುವ ಕುರಿತು ಎನರ್ಜಿಯಾ(Energia ) ಪ್ರಸ್ತಾಪಗಳಿಗಾಗಿ ರಷ್ಯಾ ಕಾಯುತ್ತಿದೆ. ಮೊದಲು ರೋಸ್ಕೋಸ್ಮೋಸ್ ವೈಜ್ಞಾನಿಕ ಮತ್ತು ತಾಂತ್ರಿಕ ಮಂಡಳಿಯಲ್ಲಿ ಪರಿಗಣಿಸಿ ನಂತರ ಸರ್ಕಾರಕ್ಕೆ ವರದಿ ಮಾಡಲಾಗುತ್ತದಂತೆ.

Russia plans to develop its own space station
ತನ್ನದೇ ಬಾಹ್ಯಾಕಾಶ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಂತೆ ರಷ್ಯಾ

By

Published : Nov 27, 2020, 3:40 PM IST

ಮಾಸ್ಕೋ: ರಷ್ಯಾದ ರಾಕೆಟ್ ಮತ್ತು ಬಾಹ್ಯಾಕಾಶ ನಿಗಮವು ತನ್ನದೇ ಆದ ಹೊಸ ಸ್ವದೇಶಿ ಬಹು - ಕ್ರಿಯಾತ್ಮಕ ಬಾಹ್ಯಾಕಾಶ ಕೇಂದ್ರದ ಅಭಿವೃದ್ಧಿಗೆ ಮುಂದಾಗುವುದಾಗಿ ಘೋಷಣೆ ಮಾಡಿಕೊಂಡಿದೆ.

ರಷ್ಯಾದ ಈ ಕಕ್ಷೀಯ ಕೇಂದ್ರವು ಮೂರರಿಂದ ಏಳು ಮಾಡ್ಯೂಲ್‌ಗಳನ್ನು ಮಾನವರಹಿತವಾಗಿ ಅಥವಾ ಎರಡು ಹಾಗೂ ನಾಲ್ಕು ಜನರ ಸಿಬ್ಬಂದಿಯನ್ನು ಇದು ಒಳಗೊಂಡಿರುತ್ತದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಬಾಹ್ಯಾಕಾಶ ಕುರಿತು ರಷ್ಯನ್ ಅಕಾಡೆಮಿ ಆಫ್ ಸೈನ್ಸ್​ನ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸೊಲೊವೊವ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್) ದೀರ್ಘಾಯುಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಕೆಲವು ಘಟಕಗಳು ಹಾನಿಗೊಳಗಾದವು ಮತ್ತು ಅದನ್ನು ಬದಲಾಯಿಸಲಾಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2025 ರ ವೇಳೆಗೆ ಐಎಸ್‌ಎಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಬಹುದು. ಅದನ್ನು ನಿರ್ವಹಿಸಲು 10-15 ಬಿಲಿಯನ್ ರೂಬೆಲ್ಸ್ ಬೇಕಾಗಬಹುದು ಎಂದು ರಷ್ಯಾ ವಿಭಾಗದ ಫ್ಲೈಟ್ ಡೈರೆಕ್ಟರ್ ಆಗಿರುವ ಸೊಲೊವೊವ್ ಮಾಹಿತಿ ನೀಡಿದ್ದಾರೆ. ಇನ್ನು ಮುಂದಿನ ವರ್ಷದ ಆರಂಭದಲ್ಲಿ ನಾಸಾ ಜೊತೆ ಐಎಸ್‌ಎಸ್‌ನ ಕಾರ್ಯಾಚರಣೆಯ ಜೀವಿತಾವಧಿಯನ್ನು ಚರ್ಚಿಸಲು ಮುಂದಾಗಿದ್ದೇವೆ ಎಂದು ರಷ್ಯಾದ ಬಾಹ್ಯಾಕಾಶ ನಿಗಮ ರೋಸ್ಕೋಸ್ಮೋಸ್ ತಿಳಿಸಿದೆ. ಐಎಸ್ಎಸ್ ಜೀವಿತಾವಧಿಯು ಮಾಡ್ಯೂಲ್​ಗಳ ತಾಂತ್ರಿಕ ಸ್ಥಿತಿ ಮತ್ತು ಪರಿಹರಿಸಲು ಯೋಜಿಸಲಾದ ಕೆಲವು ರಾಜಕೀಯ ಅಂಶಗಳ ಆಧಾರದ ಮೇಲೆ ಹೆಚ್ಚು ಅವಲಂಬಿತವಾಗಿದೆ ತಿಳಿಸಿದೆ.

ಈ ನಿಗಮವು ಪ್ರಸ್ತುತ ಹೊಸ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ರಚಿಸುವ ಕುರಿತು ಎನರ್ಜಿಯಾ(Energia ) ಪ್ರಸ್ತಾಪಗಳಿಗಾಗಿ ಕಾಯುತ್ತಿದೆ. ಇದನ್ನು ಮೊದಲು ರೋಸ್ಕೋಸ್ಮೋಸ್ ವೈಜ್ಞಾನಿಕ ಮತ್ತು ತಾಂತ್ರಿಕ ಮಂಡಳಿಯಲ್ಲಿ ಪರಿಗಣಿಸಿ ನಂತರ ಸರ್ಕಾರಕ್ಕೆ ವರದಿ ಮಾಡಲಾಗುತ್ತದಂತೆ.

ABOUT THE AUTHOR

...view details