ಮಾಸ್ಕೋ:ರಷ್ಯಾ ಎರಡನೇ ಕೋವಿಡ್ -19 ಲಸಿಕೆಯನ್ನು ನೋಂದಾಯಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ದೊಡ್ಡ ಪ್ರಮಾಣದ ಕ್ಲಿನಿಕಲ್ ಪ್ರಯೋಗಕ್ಕೆ ಮುಂಚಿತವಾಗಿ ಸ್ಪುಟ್ನಿಕ್ ವಿ ಅಧಿಕೃತವಾಗಿ ಕೋವಿಡ್-19 ಲಸಿಕೆಗೆ ಅನುಮೋದನೆ ನೀಡಿದದ ನಂತರ ಲಸಿಕೆಯೊಂದಕ್ಕೆ ಅನುಮೋದನೆ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು. ಇದು ವೈಜ್ಞಾನಿಕ ಸಮುದಾಯದಲ್ಲಿ ಕೆಲವು ಭಾಗಗಳಿಂದ ಟೀಕೆಗಳನ್ನು ಎದುರಿಸಿತು.
"ಎಪಿವಾಕ್‌ಕೊರೊನಾ" ಎಂದು ಕರೆಯಲ್ಪಡುವ ವೆಕ್ಟರ್‌ನ ಲಸಿಕೆ, SARS-CoV-2 ಪ್ರೋಟೀನ್‌ಗಳ ರಾಸಾಯನಿಕವಾಗಿ ಸಂಶ್ಲೇಷಿತ ಪೆಪ್ಟೈಡ್ ಪ್ರತಿಜನಕಗಳನ್ನು ಅವಲಂಬಿಸಿದೆ ಎಂದು ಕ್ಲಿನಿಕಲ್ ಟ್ರಯಲ್ಸ್ನಲ್ಲಿನ ವರದಿಯಲ್ಲಿ ಹೇಳಲಾಗಿದೆ.
ರಷ್ಯಾದ ಉಪಪ್ರಧಾನಿ ಟಟ್ಯಾನ ಗೋಲಿಕೋವಾ ಅವರು ಎಪಿವಾಕ್ ಕೊರೊನಾ ಲಸಿಕೆಯನ್ನು ಸ್ವತಃ ಪರೀಕ್ಷಿಸಿದ್ದಾರೆ ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸಲಿಲ್ಲ ಎಂದು ವರದಿ ತಿಳಿಸಿದೆ.
"ವೆಕ್ಟರ್ ಕೇಂದ್ರವು ರಷ್ಯಾದ ವಿವಿಧ ಪ್ರದೇಶಗಳಲ್ಲಿ ನೋಂದಣಿ ನಂತರದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸುತ್ತಿದೆ, ಇದರಲ್ಲಿ 40,000 ಸ್ವಯಂಸೇವಕರು ಸೇರಿದ್ದಾರೆ" ಎಂದು ಅವರು ಹೇಳಿದ್ದಾರೆ.