ಕಾಬೂಲ್(ಅಫ್ಘಾನಿಸ್ತಾನ):ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಹಳೆಯ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ತಾಲಿಬಾನ್ ಆಫ್ಘನ್ನಲ್ಲಿ ಜಾರಿ ಮಾಡಲು ಸಿದ್ಧತೆ ನಡೆಸಿದೆ.
ಈಗಾಗಲೇ ಅಫ್ಘಾನಿಸ್ತಾನದ ಶೇಕಡಾ 85ರಷ್ಟನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಮುಖ್ಯಸ್ಥ ತಿಳಿಸಿದ್ದು, ಈ ಪ್ರದೇಶಗಳಲ್ಲಿ ಷರಿಯತ್ ಕಾನೂನುಗಳನ್ನು ಅಳವಡಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.
ಮಾನವಹಕ್ಕುಗಳ ರಕ್ಷಣೆ ಮಾಡುವುದಾಗಿ ಹೇಳಿಕೊಂಡಿರುವ ತಾಲಿಬಾನ್ ತಾನು ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ 'ಇಸ್ಲಾಂ ಮೌಲ್ಯ'ಗಳನ್ನು ಎತ್ತಿಹಿಡಿಯುವ, ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಾನೂನುಗಳನ್ನು ರಚಿಸಿ, ಅಳವಡಿಸಲು ಮುಂದಾಗಿದೆ. ತಾಲಿಬಾನ್ ಅಳವಡಿಸಿಕೊಂಡಿರುವ ಕೆಲವು ಕಾನೂನುಗಳೆಂದರೆ..
- ಪುರುಷ ಜೊತೆಯಲ್ಲಿ ಇಲ್ಲದೇ ಮಹಿಳೆ ಯಾರೂ ಕೂಡಾ ಒಂಟಿಯಾಗಿ ಓಡಾಡುವಂತಿಲ್ಲ ಎಂದು ನಿಯಮ ರೂಪಿಸಲಾಗಿದೆ.
- ಯಾವುದೇ ಸಮಯವಾದರೂ ಎಲ್ಲಿಗಾದರೂ ಹೋಗಬೇಕಾದರೆ ಪುರುಷನೋರ್ವ ಜೊತೆಯಲ್ಲಿಯೇ ಇರಬೇಕು
- ಪುರುಷರು ತಮ್ಮ ಗಡ್ಡವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು.
- 15 ವರ್ಷ ಮೇಲ್ಪಟ್ಟ ಹೆಣ್ಮಕ್ಕಳು ಮತ್ತು 45 ವರ್ಷದೊಳಗಿನ ವಿಧವೆಯರನ್ನು ತಾಲಿಬಾನಿಗಳಿಗೆ ವಿವಾಹ ಮಾಡಿಸುವುದು.
- ಭಯೋತ್ಪಾದಕರೂ ಕೂಡಾ ಧೂಮಪಾನ ಮಾಡಬಾರದು ಮತ್ತು ಗಡ್ಡ ತೆಗೆಯಬಾರದು.
- ನಿಯಮ ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಿ, ಸ್ಥಳೀಯ ಕಾನೂನಿನಂತೆ ಶಿಕ್ಷೆ
- ಆಫ್ಘನ್ ಬಾವುಟದಲ್ಲಿರುವ ಬಣ್ಣಗಳಾದ ಕೆಂಪು ಮತ್ತು ಹಸಿರು ಬಟ್ಟೆಗಳನ್ನು ತೊಡುವಂತಿಲ್ಲ.
ಈ ಎಲ್ಲಾ ಅಂಶಗಳನ್ನು ಸ್ಥಳೀಯರು ವಿವಿಧ ಮಾಧ್ಯಮಗಳಿಗೆ ಹೇಳಿರುವ ಹೇಳಿಕೆಗಳಾಗಿದ್ದು, ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಎಲ್ಲಾ ಆರೋಪಗಳನ್ನು ಸಾಕ್ಷ್ಯರಹಿತ ಎಂದು ತಳ್ಳಿಹಾಕಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಶೃಂಗೇರಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ