ಬಾಗ್ದಾದ್: ಇರಾಕ್‌ನ ರಾಜಧಾನಿ ಬಾಗ್ದಾದ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಬಳಿ ಇಂದು ಮುಂಜಾನೆ ರಾಕೆಟ್ ದಾಳಿ ನಡೆದಿದೆ ಎಂದು ಅಮೆರಿಕದ ಮಿಲಿಟರಿ ಮೂಲಗಳು ಖಚಿತಪಡಿಸಿವೆ.
ಇರಾಕ್ ರಾಜಧಾನಿಯಲ್ಲಿನ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ - Rocket attack in bagdad
ಇರಾಕ್ ರಾಜಧಾನಿ ಬಾಗ್ದಾದ್ನ ಯುಎಸ್ ರಾಯಭಾರ ಕಚೇರಿಯ ಬಳಿ ಇಂದು ಬೆಳಿಗ್ಗೆ ರಾಕೆಟ್ ದಾಳಿ ನಡೆದಿದೆ.
![ಇರಾಕ್ ರಾಜಧಾನಿಯಲ್ಲಿನ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ Rocket attack hits near US embassy in Iraq capital: US military source](https://etvbharatimages.akamaized.net/etvbharat/prod-images/768-512-6090208-thumbnail-3x2-surya.jpg)
ಬಾಗ್ದಾದ್ ಯುಎಸ್ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ
ಈ ದಾಳಿಯು ರಾಜತಾಂತ್ರಿಕ ಕಚೇರಿ ಕಾಂಪೌಂಡ್ ಸುತ್ತ ಎಚ್ಚರಿಕೆಯ ಸೈರನ್ ಕಳುಹಿಸಿತು. ಆದರೆ ಏನಾಯಿತು ಮತ್ತು ಎಷ್ಟು ರಾಕೆಟ್‌ಗಳು ದಾಳಿ ನಡೆಸಿದವು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಯುಎಸ್ ಮೂಲಗಳು ಮಾಹಿತಿ ನೀಡಿವೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಸುಮಾರು 5,200 ಯುಎಸ್ ಸೈನಿಕರನ್ನು ಗುರಿಯಾಗಿಸಿಕೊಂಡು ಅಕ್ಟೋಬರ್‌ನಿಂದ ಇಲ್ಲಿವರೆಗೆ ಯುಎಸ್ ರಾಯಭಾರ ಕಚೇರಿ ಮೇಲೆ ನಡೆದ 19 ನೇ ದಾಳಿ ಇದಾಗಿದೆ. ಇರಾಕ್ ಬೆಂಬಲಿತ ಸಂಘಟನೆಗಳ ಕೃತ್ಯ ಇದು ಎಂದು ಯುಎಸ್ ಆರೋಪಿಸಿದೆ.