ಕರ್ನಾಟಕ

karnataka

ETV Bharat / international

ಗಡಿ ಸಂಘರ್ಷದ ಮಧ್ಯೆ ಭಾರತದ ಬಾರ್ಡರ್​​ ಬಳಿ 87 ಕಿ.ಮೀ. ಉದ್ದದ ಪಾದಚಾರಿ ರಸ್ತೆ ನಿರ್ಮಿಸಿದ ನೇಪಾಳ - ಭಾರತ ನೇಪಾಳ ಗಡಿ ವಿವಾದ

ನೇಪಾಳದ ಸುದುರ್​​ಪಶ್ಚಿಮ್ ಪ್ರಾಂತ್ಯದ ಮುಖ್ಯಮಂತ್ರಿ ತ್ರಿಲೋಚನ್ ಭಟ್ ಅವರು ಭಾರತದ ಗಡಿ ಸಮೀಪದಲ್ಲಿ ಪಾದಚಾರಿ ರಸ್ತೆಯ ಉದ್ಘಾಟನೆ ನೆರವೇರಿಸಿದರು. ಚೀನಾ ಗಡಿ ಸಮೀಪದ ವ್ಯಾಪ್ತಿಯಲ್ಲಿ 87 ಕಿ.ಮೀ ಪಾದಚಾರಿ ರಸ್ತೆ ಮಾರ್ಗ ಪೂರ್ಣಗೊಳಿಸಲು ನೇಪಾಳದ ಸಚಿವರುಗಳ ಮಂಡಳಿಯು ಸೇನೆಗೆ ಈ ಹಿಂದೆಯೇ ಸೂಚಿಸಿತ್ತು.

Nepal
ನೇಪಾಳ

By

Published : Oct 6, 2020, 5:23 PM IST

ಪಿಥೋರಗಢ್: ತನ್ನ ಜಿಲ್ಲಾ ಕೇಂದ್ರಗಳಿಂದ ಚೀನಾ ಗಡಿ ಸಮೀಪದಲ್ಲಿರುವ ಚಾಂಗ್ರು ಮತ್ತು ಟಿಂಕರ್ ಗ್ರಾಮಗಳನ್ನು ಸಂಪರ್ಕಿಸುವ ಪಾದಚಾರಿ ರಸ್ತೆಯನ್ನು ನೇಪಾಳ ಸೇನೆಯು ಇತ್ತೀಚೆಗೆ ಉದ್ಘಾಟಿಸಿದೆ.

ಸುದುರ್​​ಪಶ್ಚಿಮ್ ಪ್ರಾಂತ್ಯದ ಮುಖ್ಯಮಂತ್ರಿ ತ್ರಿಲೋಚನ್ ಭಟ್ ಅವರು ರಸ್ತೆಯ ಉದ್ಘಾಟನೆ ನೆರವೇರಿಸಿದರು. ಈ ವೇಳೆ, ಸರ್ಕಾರದ ಆಡಳಿತ ಮತ್ತು ಸೇನೆಯ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಚೀನಾ ಗಡಿ ಸಮೀಪದ ವ್ಯಾಪ್ತಿಯಲ್ಲಿ 87 ಕಿ.ಮೀ ಪಾದಚಾರಿ ರಸ್ತೆ ಮಾರ್ಗ ಪೂರ್ಣಗೊಳಿಸಲು ನೇಪಾಳದ ಸಚಿವರುಗಳ ಮಂಡಳಿಯು ಸೇನೆಗೆ ಈ ಹಿಂದೆಯೇ ಸೂಚಿಸಿತ್ತು.

ನೇಪಾಳದ ಈ ರಸ್ತೆಗಳು ಭಾರತದ ಧಾರ್ಚುಲಾ ಹಾಗೂ ಪಿಥೋರಗಢ್​ ಜಿಲ್ಲೆ ಸಂಪರ್ಕಿಸುವ ಸೇತುವೆಯ ಸಮೀಪದಲ್ಲೇ ಹಾದು ಹೋಗಿವೆ. ಭಾರತದೊಂದಿಗಿನ ಉದ್ವಿಗ್ನತೆಯ ನಂತರ ತನ್ನ ಗಡಿ ಪ್ರದೇಶಗಳಲ್ಲಿ ನೇಪಾಳ ರಸ್ತೆ ಜಾಲವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.

ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ನಡುವೆ ಮೇ ತಿಂಗಳಲ್ಲಿ ನೇಪಾಳ ಸರ್ಕಾರವು ಹೊಸ ನಕ್ಷೆ ಬಿಡುಗಡೆ ಮಾಡಿತ್ತು. ಭಾರತದ ಭೂಪ್ರದೇಶಗಳಾದ ಕಲಾಪಣಿ, ಲಿಪುಲೆಖ್ ಮತ್ತು ಲಿಂಪಿಯಾಧುರಾಗಳನ್ನು ತನ್ ನಕ್ಷೆಯಲ್ಲಿ ಸೇರಿಸಿಕೊಂಡಿದ್ದು ಬೆಳಕಿಗೆ ಬಂತು.

ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ, ನವೀಕರಿಸಿದ ನಕ್ಷೆಯು ಐತಿಹಾಸಿಕ ಸಂಗತಿಗಳು ಮತ್ತು ಪುರಾವೆಗಳನ್ನು ಆಧರಿಸಿಲ್ಲ. ನೇಪಾಳದ ಹಕ್ಕುಗಳು ಕೃತಕವಾಗಿವೆ ಎಂದಿತು.

ABOUT THE AUTHOR

...view details