ಕಠ್ಮಂಡು:ಪಕ್ಷದೊಳಗಿನ ವಿರೋಧಿ ಬಣಗಳ ನಡೆಯಿಂದ ನೇಪಾಳ ಸಂಸತ್ತಿನ ಕೆಳಮನೆಯ ವಿಸರ್ಜನೆಯ ಬಳಿಕ ಉಂಟಾದ ಸಾಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷ (ಎನ್‌ಸಿಪಿ), ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್‌ನತ್ತ ಹೆಜ್ಜೆ ಹಾಕಿದೆ.
ಉಸ್ತುವಾರಿ ಸರ್ಕಾರದ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಅವರು ಇತ್ತೀಚೆಗೆ ಸ್ಥಳೀಯ ಟೆಲಿವಿಷನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಸಂವಿಧಾನದ ಪ್ರಕಾರ ನ್ಯಾಯಾಲಯವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.
ಅಂತೆಯೇ ಶುಕ್ರವಾರ ಪುಷ್ಪ ಕಮಲ್ ದಹಾಲ್ ಮತ್ತು ಮಾಧವ್ ಕುಮಾರ್ ನೇಪಾಳ ಅವರ ನೇತೃತ್ವದ ಆಡಳಿತಾರೂಢ ಎನ್‌ಸಿಪಿಯ ಮತ್ತೊಂದು ಬಣವು ಚುನಾವಣಾ ಆಯೋಗಕ್ಕೆ ತೆರಳಿ ಕಾನೂನಿನ ಪ್ರಕಾರ ಬಹುಮತ ಹೊಂದಿರುವ 'ಅಧಿಕೃತ ಪಕ್ಷ' ಎಂದು ಮನವರಿಕೆ ಮಾಡಿದೆ.