ಕಠ್ಮಂಡು(ನೇಪಾಳ): ದೇಶದಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ ಹಾಗೂ ರಾಜಕೀಯ ಬಿಕ್ಕಟ್ಟುಗಳ ಮಧ್ಯೆ ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನೇ ಕಮ್ಯುನಿಸ್ಟ್ ಪಕ್ಷದಿಂದ ಉಚ್ಛಾಟಿಸಲಾಗಿರುವ ವಿರುದ್ಧ ಆಡಳಿತಾರೂಡ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಪ್ರತಿಸ್ಪರ್ಧಿ ಬಣ ಸೋಮವಾರ ತನ್ನ ಮೂರನೇ ಹಂತದ ಪ್ರತಿಭಟನೆಗೆ ಸಿದ್ದಗೊಂಡಿದೆ.
ಅಸಂವಿಧಾನಿಕ ಕ್ರಮವನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಈ ಆಂದೋಲನವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿಕೆ ನೀಡಿರುವ ಪ್ರತಿಸ್ಪರ್ಧಿ ಬಣ, ಜನವರಿ 26ರಂದು ರ್ಯಾಲಿ ನಡೆಸಲಿದ್ದೇವೆ ಹಾಗೂ ಮೈಟಿಘರ್ ಪ್ರದೇಶದಲ್ಲಿ ಜನವರಿ 26ರಿಂದ ಫೆಬ್ರವರಿ 3ರವರೆಗೆ ಕಠೋರ ಧರಣಿ ನಡೆಸಲಿದ್ದೇವೆ ಎಂದು ತಿಳಿಸಿದೆ.