ಕರ್ನಾಟಕ

karnataka

ETV Bharat / international

ನೈರುತ್ಯ ಚೀನಾದಲ್ಲಿ ಈ ಹಿಂದೆ ಅಪರಿಚಿತ ಕೊರೊನಾ ವೈರಸ್: ವಿಜ್ಞಾನಿಗಳ ತಂಡದ ಹೇಳಿಕೆ - ಅಪರಿಚಿತ ಕೊರೊನಾ ವೈರಸ್

ಕೊರೊನಾ ವೈರಸ್ ಮೂಲ ಸಂಶೋಧನೆ ವೇಳೆ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವಾದ 24 ಬ್ಯಾಟ್, ಈ ಹಿಂದೆ ಅಪರಿಚಿತ ಕೊರೊನಾ ವೈರಸ್​​ಗಳನ್ನು ಕಂಡುಹಿಡಿದಿದೆ.

southwestern China
ಕೊರೊನಾ ವೈರಸ್

By

Published : Mar 15, 2021, 1:09 PM IST

ಬೀಜಿಂಗ್: ಕೊರೊನಾ ವೈರಸ್ ಮೂಲದ ಹುಡುಕಾಟದ ಸಮಯದಲ್ಲಿ, ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಅಪರಿಚಿತ ಕೊರೊನಾ ವೈರಸ್​​ಗಳನ್ನು ಕಂಡುಹಿಡಿದಿದೆ. ಅವುಗಳಲ್ಲಿ ನಾಲ್ಕು ನೈರುತ್ಯ ಚೀನಾದಲ್ಲಿ 4 ಕಿ.ಮೀ ವ್ಯಾಪ್ತಿಯಲ್ಲಿ ಕೋವಿಡ್​-19ಗೆ ಕಾರಣವಾದ ವೈರಸ್​​ಗೆ ಸಂಬಂಧಿಸಿವೆ.

ಒಂದು ವೈರಸ್ 'ಜಿನೊಮಿಕ್ ಬೆನ್ನೆಲುಬು ಎಂದು ಇಲ್ಲಿಯವರೆಗೆ ಗುರುತಿಸಲಾಗಿರುವ SARS-CoV-2 ಗೆ ಹತ್ತಿರದಲ್ಲಿದೆ. ಆದರೆ, ಯಾರೂ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ಕೊರೊನಾವೈರಸ್​ ಎಲ್ಲಿಂದ ಹಬ್ಬಿತು ಎಂಬುದು ಗೊತ್ತಾಗಿಲ್ಲ. ಕೊರೊನಾಗೆ ತುಂಬಾ ಹತ್ತಿರದಲ್ಲಿರುವ ವೈರಸ್​ಗಳಾದ RpYN06, 94.5 ರಷ್ಟು SARS-CoV-2 ಹೋಲಿಕೆ ಹೊಂದಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ ) ಈ ಬಗ್ಗೆ ಉಲ್ಲೇಖಿಸಿ ವರದಿ ಮಾಡಿದೆ. COVID-19 ಹೊರಹೊಮ್ಮಿದಾಗಿನಿಂದ ಬ್ಯಾಟ್ ವಿಜ್ಞಾನಿಗಳು, ವಿಶೇಷವಾಗಿ ಇದು ಪ್ರಾಣಿಗಳಿಂದ ಹುಟ್ಟಿಕೊಂಡಿದೆ ಎಂದು ಹೇಳುತ್ತಿದ್ದಾರೆ.

ಕೊರೊನಾ ವೈರಸ್​ಗಳ ವಿಕಾಸವನ್ನು ಅಧ್ಯಯನ ಮಾಡುವ ಶಾಂಘೈ ಮೂಲದ ಜೀವ ವಿಜ್ಞಾನಿ ಪ್ರಕಾರ, ಹೆಚ್ಚಿನ ಹೊಸ ವೈರಸ್‌ಗಳು ಉಷ್ಣವಲಯದ ಪ್ರದೇಶಗಳಿಂದ ಹೊರಹೊಮ್ಮಿವೆ, ಅಲ್ಲಿ ಬಿಸಿ ವಾತಾವರಣ ಮತ್ತು ಹೇರಳವಾಗಿರುವ ಪ್ರಾಣಿ ಪ್ರಭೇದಗಳು ವಿಭಿನ್ನ ವೈರಸ್‌ಗಳು ಪರಸ್ಪರ ಸ್ಪರ್ಧಿಸಲು ಮತ್ತು ಹೊಸ ರೂಪಾಂತರಗಳನ್ನು ರಚಿಸಲು ಪರಸ್ಪರ ಬೆರೆಯಲು ಅನುವು ಮಾಡಿಕೊಡುತ್ತಿದೆ ಎಂದು ಎಸ್‌ಸಿಎಂಪಿ ವರದಿ ಮಾಡಿದೆ.

ಇಷ್ಟು ಸಣ್ಣ ಪ್ರದೇಶದಲ್ಲಿ ಅಜ್ಞಾತ ಜಾತಿಗಳ ಆವಿಷ್ಕಾರವು ಅನಿರೀಕ್ಷಿತವಾಗಿದೆ ಎಂದು ತಂಡವು ಮತ್ತಷ್ಟು ಎಚ್ಚರಿಸಿದೆ. ಈ ಸಂಕೀರ್ಣತೆಯು 'SARS-CoV-2 ಮತ್ತು ಇತರ ರೋಗಕಾರಕ ಕೊರೊನಾ ವೈರಸ್‌ಗಳ ಮೂಲವನ್ನು ಪರಿಹರಿಸುವಲ್ಲಿನ ತೊಂದರೆಗಳನ್ನು ಹೆಚ್ಚಿಸುತ್ತದೆ ಎಂದು ಕಳವಳ ಹೊರಹಾಕಿದ್ದಾರೆ.

ABOUT THE AUTHOR

...view details