ಕರ್ನಾಟಕ

karnataka

ETV Bharat / international

ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿರುವ ತಾಲಿಬಾನ್​.. ಹಜಾರ ಪ್ರಾಂತ್ಯದ 9 ಜನರ ಹತ್ಯೆ - ಕಾಬೂಲ್ ವಿಮಾನ ನಿಲ್ದಾಣ

ಹತ್ತಾರು ವಿಮಾನಗಳು ಈಗಾಗಲೇ ನೂರಾರು ಪಾಶ್ಚಿಮಾತ್ಯ ಪ್ರಜೆಗಳು ಮತ್ತು ಅಫ್ಘನ್ನರನ್ನು ಯೂರೋಪ್ ಸೇರಿ ಇತರ ದೇಶಗಳಿಗೆ ಕರೆದೊಯ್ದಿವೆ. ವಿಮಾನ ನಿಲ್ದಾಣದಲ್ಲಿನ ಅವ್ಯವಸ್ಥೆ ಕೆಲವೊಮ್ಮೆ ವಿಮಾನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತವೆ..

ತಾಲಿಬಾನ್
ತಾಲಿಬಾನ್

By

Published : Aug 20, 2021, 8:10 PM IST

Updated : Aug 20, 2021, 9:01 PM IST

ಕಾಬೂಲ್(ಅಫ್ಘಾನಿಸ್ತಾನ) :ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು ಅಲ್ಪಸಂಖ್ಯಾತರನ್ನು ಹಿಂಸಿಸಿ ಕೊಲ್ಲುತ್ತಿದ್ದು, ಜನರಲ್ಲಿ ಮತ್ತಷ್ಟು ಭಯವನ್ನುಂಟು ಮಾಡಿದೆ ಎಂದು ಅಮ್ನೆಸ್ಟಿ ಇಂಟರ್​ನ್ಯಾಷನಲ್ ಹೇಳಿದೆ. ಆಫ್ಘನ್​ನಲ್ಲಿ ಅಧಿಪತ್ಯ ಸ್ಥಾಪಿಸಿರುವ ತಾಲಿಬಾನ್​, ಸ್ಥಳೀಯರನ್ನು ಹಿಂಸಿಸುತ್ತಿದ್ದು, ಸಾವಿರಾರು ಜನರು ಕಾಬೂಲ್ ವಿಮಾನ ನಿಲ್ದಾಣದತ್ತ ಓಡಿ ಬರುತ್ತಿದ್ದಾರೆ.

ಏಕತೆಗಾಗಿ ತಾಲಿಬಾನ್ ಮನವಿ

ಇಂದು ಶುಕ್ರವಾರದ ಪ್ರಾರ್ಥನೆ ಮಾಡುವ ಮುನ್ನ ತಾಲಿಬಾನಿಗಳು, ಇಮಾಮ್​ಗಳಿಗೆ ಧರ್ಮೋಪದೇಶ ಬಳಸಿ ಏಕತೆಗಾಗಿ ಮನವಿ ಮಾಡಿದರು. ಅಲ್ಲದೆ, ಜನತೆ ದೇಶ ಬಿಟ್ಟು ಓಡಿ ಹೋಗದಂತೆ ಮನವಿ ಮಾಡಿದರು. ಆದರೆ, ತಾಲಿಬಾನಿಗಳ ಈ ಹೇಳಿಕೆಗಳಿಗೆ ಅಫ್ಘನ್ನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

9 ಜನರ ಹತ್ಯೆ

ಜುಲೈ 4 ರಿಂದ 6ರವರೆಗೆ ಮುಂಡಾರಖ್ತ್ ಗ್ರಾಮದಲ್ಲಿ 9 ಮಂದಿ ಹಜಾರ ಪುರುಷರನ್ನು ತಾಲಿಬಾನ್ ಹತ್ಯೆಗೈದಿದೆ. ಆರು ಜನರನ್ನು ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದ್ದು, ಮೂವರಿಗೆ ಚಿತ್ರ ಹಿಂಸೆ ನೀಡಲಾಗಿದೆ. ಈ ರೀತಿ ಜನರನ್ನು ಹತ್ಯೆಗೈಯ್ಯುತ್ತಿದ್ದರೂ, ತಾಲಿಬಾನ್​ ಏಕತೆಗಾಗಿ ಮನವಿ ಮಾಡುತ್ತಿರುವುದು ಜನರಲ್ಲಿ ಭೀತಿ ಸೃಷ್ಟಿಸಿದೆ.

ಎರಡು ದಿನಗಳಲ್ಲಿ 2 ಸಾವಿರ ಜನರ ಸ್ಥಳಾಂತರ

ಕಳೆದ ಎರಡು ದಿನಗಳಲ್ಲಿ ಅಮೆರಿಕದ ವಿಮಾನಗಳಲ್ಲಿ ಸುಮಾರು 2,000 ಜನರನ್ನು ಕರೆತರಲಾಗಿದೆ ಎಂದು ಪೆಂಟಗನ್ ಹೇಳಿದೆ. ಇನ್ನೂ 6,000 ಜನರು ಹೊರಡುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಆದರೆ, ಸಾವಿರಾರು ಅಮೆರಿಕನ್ನರು ಮತ್ತು ಅವರ ಅಫ್ಘನ್​ ಮಿತ್ರರು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.

ಹತ್ತಾರು ವಿಮಾನಗಳು ಈಗಾಗಲೇ ನೂರಾರು ಪಾಶ್ಚಿಮಾತ್ಯ ಪ್ರಜೆಗಳು ಮತ್ತು ಅಫ್ಘನ್ನರನ್ನು ಯೂರೋಪ್ ಸೇರಿ ಇತರ ದೇಶಗಳಿಗೆ ಕರೆದೊಯ್ದಿವೆ. ವಿಮಾನ ನಿಲ್ದಾಣದಲ್ಲಿನ ಅವ್ಯವಸ್ಥೆ ಕೆಲವೊಮ್ಮೆ ವಿಮಾನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತವೆ.

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್, ಆಸ್ಟ್ರೇಲಿಯಾದ ನಾಗರಿಕರನ್ನು ಕಾಬೂಲ್ ಹೊರಗಿನಿಂದ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ರಾಜಧಾನಿಯಲ್ಲಿಯೂ ಪರಿಸ್ಥಿತಿ ಕಷ್ಟಕರವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾಬೂಲ್​ನಲ್ಲಿ ಸಿಲುಕಿರುವ ಜನರ ಸ್ಥಳಾಂತರಕ್ಕೆ ಭಾರತ, ಪಾಕ್​, ಜರ್ಮನ್​ ಕ್ರಮ

ತಾಲಿಬಾನ್​ ಧ್ವಜ ಕೆಳಗಿಳಿಸಿದವನ ಹತ್ಯೆ

ತಾಲಿಬಾನ್ ಹಿಂಸಾಚಾರವನ್ನು ವಿರೋಧಿಸಿ ಆಫ್ಘನ್​ನ ಕೆಲವಡೆ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬ ತಾಲಿಬಾನ್​ ಧ್ವಜ ಕೆಳಗಿಳಿಸಿ, ಆಫ್ಘನ್​ ಧ್ವಜ ನೆಟ್ಟಿದ್ದಕ್ಕೆ ಅವನನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈಯ್ಯಲಾಗಿದೆ.

ಕಾಬೂಲ್​ನಲ್ಲಿ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದ್ದು ಅನಿಶ್ಚಿತತೆ ಸೃಷ್ಟಿಯಾಗಿದೆ.

Last Updated : Aug 20, 2021, 9:01 PM IST

ABOUT THE AUTHOR

...view details