ಇಸ್ಲಾಮಾಬಾದ್:ಕಾಶ್ಮೀರದ ಗಡಿ ಭಾಗದಲ್ಲಿ ಪ್ರಸ್ತುತ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಅತ್ತ ಭಾನುವಾರ ಸಭೆ ಸೇರಿದ್ದ ಪಾಕ್ ಭದ್ರತಾ ಸಮಿತಿ ಸದ್ಯದ ಘಟನಾವಳಿಗಳ ಬಗ್ಗೆ ಅವಲೋಕನ ಮಾಡಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ಬಳಿಕ, ಭಾರತ ಸೇನೆ ಪಾಕಿಸ್ತಾನ ನಾಗರಿಕರ ಮೇಲೆ ಕ್ಲಸ್ಟರ್ ಬಾಂಬ್ಗಳ ಪ್ರಯೋಗ ಮಾಡಿದೆ ಎಂದು ಆರೋಪ ಮಾಡಿದೆ.