ಇಸ್ಲಾಮಾಬಾದ್: ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ನಾವು ಪರಮಾಣು ದಾಳಿ ನಡೆಸಲಿದ್ದೇವೆ ಎಂದು ಪಾಕಿಸ್ತಾನದ ರೈಲ್ವೆ ಖಾತೆ ಸಚಿವ ಶೇಖ್ ರಶೀದ್ ಅಹ್ಮದ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಟಿವಿ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿರುವ ಶೇಖ್ ರಶೀದ್, ಒಂದು ವೇಳೆ ಭಾರತ ಆಕ್ರಮಣ ಮಾಡಿದರೆ ಅದು ಸಾಂಪ್ರದಾಯಿಕ ಯದ್ಧ ಆಗಿರಲು ಸಾಧ್ಯವಿಲ್ಲ. ಬದಲಿಗೆ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ನಾವು ಉತ್ತರ ನೀಡಲಿದ್ದೇವೆ. ಯುದ್ಧದ ವೇಳೆ ಮುಸ್ಲಿಮರಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂದಿರುವ ಅವರು, ಕೇವಲ ಪ್ರದೇಶ ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದಿದ್ದಾರೆ.
ಭಾರತದೊಂದಿಗೆ ನಡೆಯುವ ಈ ಯುದ್ಧ ರಕ್ತಸಿಕ್ತ ಹಾಗೂ ಕೊನೆಯ ಪರಮಾಣು ಯುದ್ಧವಾಗಲಿದೆ. ನಮ್ಮ ಬಳಿ ಕೂಡ ಅತ್ಯಂತ ನಿಖರ, ಸಮರ್ಥ, ಸಣ್ಣ ಪರಮಾಣು ಶಸ್ತ್ರಾಸ್ತ್ರಗಳಿವೆ. ಭಾರತದ ಅಸ್ಸೋಂವರೆಗೆ ನಾವು ನಿಖರವಾಗಿ ದಾಳಿ ಮಾಡಬಹುದಾಗಿದೆ ಎಂದಿದ್ದಾರೆ.