ಕರ್ನಾಟಕ

karnataka

ETV Bharat / international

ಭಾರತ ಆರೋಪಿಸಿದ್ದ ಜಾಗದಲ್ಲಿ ಉಗ್ರರ ನೆಲೆಗಳೇ ಇಲ್ವಂತೆ: ಪಾಕ್​ ಮತ್ತೆ ಕಳ್ಳಾಟ - ಪುಲ್ವಾಮ ದಾಳಿ

ಭಾರತ ಆರೋಪಿಸಿದಂತೆ ಪಾಕ್​ನಲ್ಲಿರ ಉಗ್ರ ನೆಲೆಗಳಿರುವುದು ಸುಳ್ಳು ಎಂದು ಪಾಕ್​ ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದೆ

ತನ್ನ ದೇಶದೊಳಗೆ ಉಗ್ರರ ನೆಲೆಗಳಿ್ಲ್ಲ ಎಂದು ಭಾರತಕ್ಕೆ ವರದಿ ನೀಡಿದ ಪಾಕಿಸ್ತಾನ

By

Published : Mar 28, 2019, 1:45 PM IST

ಇಸ್ಲಾಮಾಬಾದ್​:ಭಾರತದ ಗುರುತಿಸಿದ್ದ ಪಾಕಿಸ್ತಾನದ 22 ಪ್ರಮುಖ ಸ್ಥಳಗಳಲ್ಲಿ ಉಗ್ರ ನೆಲೆಗಳೇ ಇಲ್ಲ ಎಂದು ಪುಲ್ವಾಮ ದಾಳಿ ಸಂಬಂಧ ಹಂಚಿಕೊಂಡಿರುವ ಪ್ರಾಥಮಿಕ ವರದಿಯಲ್ಲಿ ಪಾಕ್​ ಉಲ್ಲೇಖಿಸಿದೆ.

ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮ ದಾಳಿ ಸಂಬಂಧ ಪಾಕ್​ ಪ್ರಾಥಮಿಕ ವರದಿಯನ್ನು ಇಂದು ಭಾರತದೊಂದಿಗೆ ಹಂಚಿಕೊಂಡಿದೆ. ಇದರಲ್ಲಿ ಭಾರತದ ಆರೋಪಗಳೆಲ್ಲ ಸುಳ್ಳು ಎಂಬರ್ಥದಲ್ಲೇ ಉಲ್ಲೇಖಿಸಿದೆ.

ಭಾರತದ ಗುರುತಿಸಿದ್ದ ಪಾಕ್​ನ 22 ಪ್ರಮುಖ ಸ್ಥಳಗಳಲ್ಲಿ ಉಗ್ರರ ನೆಲೆಗಳು ಇಲ್ಲ. ಅಲ್ಲದೇ, ದಾಳಿ ಆರೋಪದಲ್ಲಿ ಬಂಧಿಸಲಾದ 54 ಮಂದಿಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪರೋಕ್ಷವಾಗಿ ಮತ್ತೆ ಕೆಣಕಿದೆ.

ಪುಲ್ವಾಮ ದಾಳಿಯಲ್ಲಿ ಯೋಧರು ಹುತಾತ್ಮರಾದ ಸಂದರ್ಭ

ಭಾರತ ಗುರುತಿಸಿದ್ದ 22 ಜಾಗಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಉಗ್ರರ ನೆಲೆಗಳಿಲ್ಲ. ಈ ಜಾಗಗಳಿಗೆ ಭೇಟಿ ನೀಡಲು ನಾವೇ ಅನುಮತಿ ನೀಡುತ್ತೇವೆ ಎಂದೂ ಹೇಳಿದೆ. ಈ ಸಂಬಂಧ 54 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ಅವರಿಗೂ, ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ ಎಂದು ಹೇಳಿದೆ.

ಪುಲ್ವಾಮ ದಾಳಿ ನಂತರ ಪಾಕ್​ ಮೇಲೆ ಆರೋಪಗಳು ಬಂದಾಗ, ಈ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪಾಕ್​ ಹೇಳಿತ್ತು. ಅದರಂತೆಯೆ, 91 ಪುಟಗಳ, ಆರು ಭಾಗಗಳ ಮಹತ್ವದ ದಾಖಲೆಗಳನ್ನು ಪಾಕ್​ ಹೈ ಕಮಿಷನರ್​ಗೆ ಭಾರತ ನೀಡಿತ್ತು. ಇದರ ಆಧಾರವಾಗಿ ಪಾಕ್​ ಸಹ ತನಿಖೆ ಕೈಗೊಂಡಿದ್ದಾಗಿ, ಹಲವರನ್ನು ಬಂಧಿಸಿದ್ದಾಗಿ ಹೇಳಿಕೊಂಡಿತ್ತು. ಇದೀಗ ಭಾರತದ ಎಲ್ಲ ಆರೋಪಗಳನ್ನು ಅಲ್ಲಗಳೆದು, ವರದಿ ನೀಡಿದೆ.

ಭಾರತದ ಮಾಡಿರುವ ಇನ್ನುಳಿದ ಆರೋಪಗಳ ಬಗ್ಗೆಯೂ ತನಿಖೆ ಮುಂದುವರಿಸುವುದಾಗಿ ಪಾಕ್​ ವರದಿಯಲ್ಲಿ ಹೇಳಿದೆ. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ನೀಡುವ ಕುರಿತು ಭಾರತದೊಂದಿಗೆ ಮಾತನಾಡಲು ಪಾಕ್​ ಬದ್ಧವಾಗಿದೆ ಎಂದಿದೆ.


ABOUT THE AUTHOR

...view details