ಕರ್ನಾಟಕ

karnataka

ETV Bharat / international

ಬ್ಯಾಂಕಾಕ್​ನಲ್ಲಿ ಮುಂದುವರೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆ - ಬ್ಯಾಂಕಾಕ್​ನಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆ

ಪ್ರಧಾನಿ ಪ್ರಯುತ್ ಚಾನ್-ಓಚಾ ರಾಜೀನಾಮೆ ನೀಡಬೇಕು, ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರಜಾಪ್ರಭುತ್ವ ಘೋಷಿಸಬೇಕು ಮತ್ತು ರಾಜಪ್ರಭುತ್ವವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಸುಧಾರಣೆಗಳನ್ನು ತರಬೇಕೆಂದು ಆಗ್ರಹಿಸಿ, ಬ್ಯಾಂಕಾಕ್​ನಲ್ಲಿ ಬೃಹತ್​ ಪ್ರತಿಭಟನೆ ನಡೆದಿದೆ.

Pro-democracy demonstrations continue in Bangkok
ಬ್ಯಾಂಕಾಕ್​ನಲ್ಲಿ ಮುಂದುವರೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆ

By

Published : Nov 29, 2020, 11:55 AM IST

ಬ್ಯಾಂಕಾಕ್ :ಥಾಯ್​ಲ್ಯಾಂಡ್​ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರು ಬ್ಯಾಂಕಾಂಕ್​ನಲ್ಲಿ ಶನಿವಾರ ಮತ್ತೊಂದು ಱಲಿಯನ್ನು ನಡೆಸಿದ್ದಾರೆ.

ಕಾಲ್ನಡಿಗೆ ಮತ್ತು ವಾಹನಗಳಲ್ಲಿ ಬಂದ ನೂರಾರು ಜನರು, ರಾಜಧಾನಿಯಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರಧಾನಿ ಪ್ರಯುತ್ ಚಾನ್-ಓಚಾ ರಾಜೀನಾಮೆ ನೀಡಬೇಕು, ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರಜಾಪ್ರಭುತ್ವ ಘೋಷಿಸಬೇಕು ಮತ್ತು ರಾಜಪ್ರಭುತ್ವವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಸುಧಾರಣೆಗಳನ್ನು ತರಬೇಕು ಎನ್ನುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ.

ಪ್ರಜಾಪ್ರಭುತ್ವ ಪರ ಪ್ರತಿಭಟನೆ

ಮಹಾರಾಜ ವಾಜಿರಲಾಂಗ್‌ಕಾರ್ನ್ ಸಾಂವಿಧಾನಿಕ ರಾಜಪ್ರಭುತ್ವದ ಅಡಿಯಲ್ಲಿ ಇರುವುದಕ್ಕಿಂತ ಹೆಚ್ಚಿನ ಅಧಿಕಾರಿವನ್ನು ಹೊಂದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು, ಅದನ್ನೇ ತಮ್ಮ ಅಭಿಯಾನದ ಪ್ರಮುಖ ವಿಷಯವಾಗಿಸಿದ್ದಾರೆ. ಈ ನಡುವೆ ರಾಜಪ್ರಭುತ್ವದ ರಕ್ಷಣೆಯು ತನ್ನ ಪ್ರಮುಖ ಕರ್ತವ್ಯ ಎಂದು ಸೇನೆ ಘೋಷಿಸಿದೆ.

ರಾಜಪ್ರಭುತ್ವದ ಬಗ್ಗೆ ಯಾವುದೇ ಟೀಕೆ ಮಾಡುವುದು ನಿಷೇಧವಾಗಿದ್ದರೂ, ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರು ತಮ್ಮ ತಮ್ಮ ಬ್ಯಾನರ್​, ಫ್ಲೆಕ್ಸ್, ಪ್ಲೆ ಕಾರ್ಡ್​ಗಳಲ್ಲಿ ರಾಜ ಮತ್ತು ಅರಮನೆಯನ್ನು ಟೀಕಿಸುವ ಬರವಣಿಗೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕಳೆದ ವಾರ ಥಾಯ್ ಅಧಿಕಾರಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದ 12 ನಾಯಕರ ವಿರುದ್ಧ ರಾಜಪ್ರಭುತ್ವವನ್ನು ಟೀಕಿಸಿದ ಆರೋಪ ಹೊರಿಸಿದ್ದಾರೆ. ಥಾಯ್​ಲ್ಯಾಂಡ್​ನಲ್ಲಿ ರಾಜಪ್ರಭುತ್ವವನ್ನು ಟೀಕಿಸಿದರೆ, (ಲೆಸ್ ಮೆಜೆಸ್ಟೆ ಕಾನೂನು ಪ್ರಕಾರ) ಮೂರರಿಂದ 15 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಕಳೆದ ಮೂರು ವರ್ಷಗಳಿಂದ ರಾಜ ಪ್ರಭುತ್ವದ ವಿರುದ್ಧ ಹಲವಾರು ಜನರು ಟೀಕೆ ಮಾಡಿದ್ದರೂ, ಯಾರ ಈ ಕಾನೂನು ಬಳಸಲಾಗಿಲ್ಲ.

ಪ್ರತಿಭಟನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಭಾವಿಸಿದರೆ, ಪ್ರತಿಭಟನೆ ಅದರಷ್ಟಕ್ಕೇ ತಣ್ಣಗಾಗಬಹುದು, ಅಥವಾ ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮ ಜರುಗಬಹುದು. ಇಲ್ಲದಿದ್ದರೆ, ಜನ ಧಂಗೆಯೆದ್ದು ಸೈನ್ಯದ ವಿರುದ್ಧ ಸಮರ ಸಾರಬಹುದು.

ABOUT THE AUTHOR

...view details