ಕಾಬೂಲ್ (ಅಫ್ಘಾನಿಸ್ತಾನ):ಉಗ್ರರ ಕಪಿಮುಷ್ಠಿಯಲ್ಲಿರುವ ಆಫ್ಘನ್ನಿಂದ ಜನತೆ ಬೇರೆಡೆಗೆ ತೆರಳಲು ಹೆಣಗಾಡುತ್ತಿದ್ದಾರೆ. ಆದರೆ, ಕಾಬೂಲ್ನಲ್ಲಿರುವ ಹಿಂದೂ ಅರ್ಚಕನೊಬ್ಬ ನಾನು ದೇಶ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರತನ್ ನಾಥ್ ದೇವಾಲಯದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಎಂಬುವರು ಇಂಥ ದೃಢ ನಿರ್ಧಾರ ಕೈಗೊಂಡಿದ್ದಾರೆ. ಆಫ್ಘನ್ನಲ್ಲಿ ತಾಲಿಬಾನ್‌ಗಳು ತಮ್ಮ ಆಕ್ರಮಣ ಮುಂದುವರಿಸಿದ್ದು, ಕುಮಾರ್ ಅವರನ್ನು ದೇಶ ತೊರೆಯುವಂತೆ ಒತ್ತಾಯಿಸಲಾಗಿದೆ. ಅಲ್ಲಿರುವ ಹಿಂದೂಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ದೇವರ ಬಗ್ಗೆ ಅಚಲ ಭಕ್ತಿ ಹೊಂದಿರುವ ಕುಮಾರ್, ನಾನು ದೇಗುಲ ಬಿಟ್ಟು ತೆರಳಲು ಸಿದ್ಧರಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ತಬ್ಬಲಿ ಮಗುವಿನ ಕೂಗು ಕೇಳಿಸದೇ ಈ ಕಲ್ಲು ಹೃದಯಕೆ..?: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕರುಣಾಜನಕ ಚಿತ್ರ!