ನವದೆಹಲಿ: ಅಫ್ಘಾನಿಸ್ತಾನ ತಾಲಿಬಾನ್‌ಗಳ ನಿಯಂತ್ರಣಕ್ಕೆ ಬಂದ ನಂತರ ನೆರೆಯ ದೇಶಗಳ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಅಫ್ಘಾನ್‌ನಿಂದ ಭಾರತಕ್ಕೆ ಆಮದಾಗುತ್ತಿದ್ದ ಒಣ ಹಣ್ಣುಗಳ ಬೆಲೆ ವಿಪರೀತವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ದೆಹಲಿಯ ವ್ಯಾಪಾರಿಯೊಬ್ಬರು, ಅಫ್ಘಾನಿಸ್ತಾನದಿಂದ ಒಣಹಣ್ಣುಗಳ ಸರಬರಾಜು ನಿಂತಿದೆ. ಹಾಗಾಗಿ ದರಗಳು ದುಬಾರಿಯಾಗಿವೆ. ಪ್ರತಿ ಕೆಜಿ ಬಾದಾಮಿ ದರ 500 ರಿಂದ 1000 ರೂ.ಗಳಿಗೆ ಹೆಚ್ಚಾಗಿದೆ. ಪಿಸ್ತಾ ಮತ್ತು ಅಂಜೂರದ ಬೆಲೆಯೂ ಜಾಸ್ತಿಯಾಗಿದೆ ಎಂದು ಹೇಳಿದರು.
ಅಫ್ಘನ್ ಸಂಘರ್ಷದಿಂದಾಗಿ ಕಾಬೂಲ್‌ನಿಂದ ಸರಕುಗಳ ಸಾಗಣೆಗೆ ಅಡಚಣೆಯಾಗಿದೆ. ಹಬ್ಬದ ಸೀಸನ್ ಬರುತ್ತಿದ್ದು, ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಾವು ಆಶಿಸುತ್ತಿದ್ದೇವೆ ಎಂದು ಮತ್ತೊಬ್ಬ ವ್ಯಾಪಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 1 ಕೋಟಿ 40 ಲಕ್ಷ ಜನ ಹಸಿವಿನಿಂದ ಬಳಲುತ್ತಿದ್ದಾರೆ: ವಿಶ್ವಸಂಸ್ಥೆ ಕಳವಳ
ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಶುರು ಮಾಡಿದ ನಂತರ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ನಂತರ ತಾಲಿಬಾನ್ ಕಾಬೂಲ್‌ಗೆ ನುಗ್ಗಿ ಅಧಿಕಾರವನ್ನು ತನ್ನ ಹಿಡಿತಕ್ಕೆ ಪಡೆದಿದೆ.