ಕರ್ನಾಟಕ

karnataka

ETV Bharat / international

ಅಘ್ಘಾನಿಸ್ತಾನ ತಾಲಿಬಾನ್ ವಶ; ದೇಶ ತೊರೆದು ತಜಕಿಸ್ತಾನಕ್ಕೆ ತೆರಳಿದ ಅಶ್ರಫ್ ಘನಿ - ಅಧ್ಯಕ್ಷ ಅಶ್ರಫ್ ಘನಿ

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದು ನೆರೆಯ ತಜಕಿಸ್ತಾನಕ್ಕೆ ತೆರಳಿದ್ದಾರೆ.

ashraf-ghani
ಅಶ್ರಫ್ ಘನಿ

By

Published : Aug 15, 2021, 7:54 PM IST

ಕಾಬೂಲ್:ತಾಲಿಬಾನ್​ ಪಡೆಯು ಅಘ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶದ​ ತೊರೆದು ನೆರೆಯ ರಾಷ್ಟ್ರ ತಜಕಿಸ್ತಾನಕ್ಕೆ ಹೋಗಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ಅವರು, ದೇಶವನ್ನು ರಕ್ಷಿಸುವಲ್ಲಿ ಅಫ್ಘಾನ್ ಪಡೆಗಳು ತೋರಿದ ಧೈರ್ಯಕ್ಕೆ ಧನ್ಯವಾದ. ಈಗಾಗಲೇ ರಾಷ್ಟ್ರದಲ್ಲಿ ಸಾಕಷ್ಟು ಸಾವುನೋವು ಸಂಭವಿಸಿದೆ. ಇನ್ನೂ ಹೆಚ್ಚಿನ ಸಾವುಗಳನ್ನು ನೋಡಲು ನನಗಿಷ್ಟವಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಭದ್ರತೆ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಪುನರ್ ಸಂಘಟಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಘನಿ ಹೇಳಿದ್ದಾರೆ.

ಇದನ್ನೂ ಓದಿ: 103 ದಿನಗಳ ಸಮರದ ಹಾದಿ..: ಅಫ್ಘಾನಿಸ್ತಾನ ತಾಲಿಬಾನ್ ಕೈಸೇರಿದ ಕಾಲಾನುಕ್ರಮ..

ನಿಮ್ಮ ಜೀವನವೇ ನನಗೆ ಮುಖ್ಯ. ನನ್ನ ಜನರ ಮುಂದಿನ ಅಸ್ತಿರತೆ, ಹಿಂಸೆ, ಸ್ಥಳಾಂತರ ತಡೆಯುವುದೇ ನನ್ನ ಮುಖ್ಯ ಉದ್ದೇಶ. ಇದಕ್ಕಾಗಿ ನಾನು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details