ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ನಿಂದಾಗಿ ಅಫ್ಘಾನಿಸ್ತಾನದಲ್ಲಿ ಸರ್ಕಾರ ಉರುಳಿ ಅರಾಜಕತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 4 ತಿಂಗಳಲ್ಲಿ ಅಲ್ಲಿಂದ ಸುಮಾರು 5 ಲಕ್ಷ ಜನರು ದೇಶವನ್ನು ತೊರೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ-ಕಮಿಷನರ್ (United Nations High Commissioner for Refugees) ವರದಿಯಲ್ಲಿ ತಿಳಿಸಿದ್ದಾರೆ.
ಸದ್ಯಕ್ಕೆ ಅಫ್ಘಾನ್ ಜನರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿಲ್ಲವಾದರೂ, ಅಲ್ಲಿನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಮಂದಿ ಹೊರ ಹೋಗುವಂತೆ ಮಾಡಲಿದೆ ಎಂದು ಡೆಪ್ಯುಟಿ ಹೈ ಕಮಿಷನರ್ ಕೆಲ್ಲಿ ಟಿ ಕ್ಲೆಮೆಂಟ್ಸ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ನೆರೆಯ ರಾಷ್ಟ್ರಗಳು ತಮ್ಮ ಗಡಿಗಳನ್ನು ಅಫ್ಘಾನ್ ನಿರಾಶ್ರಿತರಿಗೆ ಮುಕ್ತವಾಗಿಡುವಂತೆ ಯುಎನ್‌ಎಚ್‌ಸಿಆರ್ ಕೇಳಿಕೊಂಡಿದೆ. ಈ ಮಧ್ಯೆ ವಿಶ್ವ ಆಹಾರ ಕಾರ್ಯಕ್ರಮವು (ಡಬ್ಲ್ಯುಎಫ್‌ಪಿ) ನಿರಾಶ್ರಿತ ಅಫ್ಘಾನ್ನರಿಗೆ ಆಹಾರ ಒದಗಿಸಲು ವಿಶ್ವಸಂಸ್ಥೆಯ ಬಳಿ ಮನವಿ ಮಾಡಿದೆ.