ಕರ್ನಾಟಕ

karnataka

ETV Bharat / international

ನೇಪಾಳ ಸಂಸತ್ತು ವಿಸರ್ಜನೆ: ಸರ್ಕಾರದ ವಿರುದ್ಧ ಪ್ರತಿಭಟಿಸಿದವರ ಬಂಧನ

ಕೆಪಿ ಓಲಿ ಅವರ ಕ್ರಮ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸಂಸತ್ತು ವಿಸರ್ಜಿಸಿರುವುದನ್ನು ಪ್ರಶ್ನಿಸಿ 13 ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆಯನ್ನು ನಾಳೆಗೆ ನಿಗದಿ ಮಾಡಲಾಗಿದೆ.

Police crackdown on demonstrators opposing parliament dissolution in Nepal
ಸರ್ಕಾರದ ವಿರುದ್ಧ ಪ್ರತಿಭಟಿಸಿದವರ ಬಂಧನ

By

Published : Jan 14, 2021, 11:08 AM IST

ಕಠ್ಮಂಡು (ನೇಪಾಳ):ಸಂಸತ್ತನ್ನು ವಿಸರ್ಜಿಸಿರುವುದನ್ನು ವಿರೋಧಿಸಿ ರಾಜಧಾನಿಯಲ್ಲಿ ಪ್ರತಿಭಟಿಸುತ್ತಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ವಿದ್ಯಾರ್ಥಿ ಸಂಘಟನೆ ಸಂಸತ್ತು ವಿಸರ್ಜಿಸಿರುವುದನ್ನು ಖಂಡಿಸಿ ರಾಜಧಾನಿಯಲ್ಲಿ ಧರಣಿ ನಡೆಸಿ, ತಲೆ ಬೋಳಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಹಲವರನ್ನು ಬಂಧಿಸಿದ್ದಾರೆ.

ಈ ವೇಳೆ ಪ್ರತಿಭಟನಾ ನಿರತನೊಬ್ಬ ಮಾತನಾಡಿ, ಅವರು ಸಂಸತ್ತನ್ನೇ ವಿಸರ್ಜಿಸಬಹುದು. ಆದರೆ, ನಾವು ತಲೆ ಬೋಳಿಸಿಕೊಳ್ಳಲು ಸಹ ಸಾಧ್ಯವಿಲ್ಲ..? ಯಾವ ಸಂವಿಧಾನದ ಆಧಾರದ ಮೇಲೆ ನಮ್ಮನ್ನು ತಡೆಯುತ್ತೀರಿ.? ಇದು ನಮ್ಮ ಸಂವಿಧಾನ ಎಂದಿದ್ದಾರೆ.

ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಚುನಾವಣೆಗೆ ಹೊಸ ದಿನಾಂಕಗಳನ್ನು ಘೋಷಿಸಿದ ನಂತರ ಕಠ್ಮಂಡುವಿನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಪಿ ಓಲಿ ಅವರ ಕ್ರಮ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸಂಸತ್ತು ವಿಸರ್ಜಿಸಿರುವುದನ್ನು ಪ್ರಶ್ನಿಸಿ 13 ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆಯನ್ನು ನಾಳೆಗೆ ನಿಗದಿ ಮಾಡಲಾಗಿದೆ.

ಇದನ್ನೂ ಓದಿ:ವಿಷಪೂರಿತ ಮದ್ಯ ಸೇವಿಸಿ ರಾಜಸ್ಥಾನದಲ್ಲಿ 7 ಮಂದಿ ಸಾವು..

ABOUT THE AUTHOR

...view details