ಬ್ಯಾಂಕಾಕ್:ಥಾಯ್ಲೆಂಡ್ ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ಮೋದಿ ಆಸಿಯನ್ ಶೃಂಗಸಭೆಯಲ್ಲಿ ಭಾಗವಹಿಸಿ ಹೂಡಿಕೆದಾರರನ್ನ ಭಾರತಕ್ಕೆ ಆಹ್ವಾನಿಸಿದ್ದಾರೆ.
ಶೃಂಗಸಭೆಯಲ್ಲಿ ಭಾಗವಹಿಸಿ ಹೂಡಿಕೆ ದಾರರನ್ನ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮವಾದ ಸಮಯ ಕಳೆದ 5 ವರ್ಷಗಳಲ್ಲಿ ಭಾರತಕ್ಕೆ 286 ಬಿಲಿಯನ್ ಅಮೆರಿಕ ಡಾಲರ್ ಹಣ ವಿದೇಶಿ ನೇರ ಹೂಡಿಕೆಯಿಂದ ಬಂದಿದೆ. ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಬಂದ ಹಣದ ಅರ್ಧದಷ್ಟು ಹಣ ಕೇವಲ 5 ವರ್ಷಗಳಲ್ಲೇ ಹರಿದುಬಂದಿದೆ. ನಾನು ತುಂಬಾ ಖಚಿತವಾಗಿ ಹೇಳಬಲ್ಲೆ ಈದು ಬಾರತದಲ್ಲಿ ಹೂಡಿಕೆ ಮಾಡಲು ಇರುವ ಉತ್ತಮ ಸಮಯ ಎದಿದ್ದಾರೆ.