ಒಸಾಕ(ಜಪಾನ್): ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ತಡರಾತ್ರಿ ಜಪಾನ್ ತಲುಪಿದ್ದಾರೆ.
ಪ್ರಧಾನಿ ಮೋದಿ ಭಾಗವಹಿಸುತ್ತಿರುವ ಆರನೇ ಜಿ20 ಶೃಂಗಸಭೆ ಇದಾಗಿದ್ದು, ನಾಳೆಯಿಂದ ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಮೋದಿ ಹಲವು ಜಾಗತಿಕ ನಾಯಕರನ್ನು ಭೇಟಿ ಮಾಡಲಿದ್ದಾರೆ. ಅಮೆರಿಕ ಜೊತೆಗಿನ ಸಂಬಂಧ ಹದಗೆಟ್ಟ ಬಳಿಕ ಮೊದಲ ಬಾರಿಗೆ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್ರನ್ನು ಜಿ20 ಶೃಂಗಸಭೆಯಲ್ಲಿ ಭೇಟಿ ಮಾಡಲಿದ್ದಾರೆ.
ಮಹಿಳಾ ಸಬಲೀಕರಣ, ಕೃತಕ ಬುದ್ಧಿಮತ್ತೆ ಹಾಗೂ ಭಯೋತ್ಪಾದನೆ ನಿಗ್ರಹ ವಿಚಾರಗಳು ಈ ಬಾರಿ ಜಿ20 ಶೃಂಗಸಭೆಯ ಪ್ರಮುಖ ಅಜೆಂಡಾ ಎಂದು ಜಪಾನ್ಗೆ ತೆರಳುವ ಮುನ್ನ ಸುದ್ದಿಗಾರರಿಗೆ ಮೋದಿ ತಿಳಿಸಿದ್ದಾರೆ.
2022ರಲ್ಲಿ ನಡೆಯುವ ಜಿ20 ಶೃಂಗಸಭೆ ಭಾರತದಲ್ಲಿ ಆಯೋಜನೆಯಾಗಲಿದ್ದು, ಈ ನಿಟ್ಟಿನಲ್ಲಿ ಒಸಾಕದಲ್ಲಿ ನಡೆಯುವ ಜಿ20 ಶೃಂಗಸಭೆ ಮುನ್ನುಡಿ ಬರೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಒಸಾಕದ ಹೋಟೆಲ್ಗೆ ಪ್ರಧಾನಿ ಮೋದಿ ತೆರಳಿದ ವೇಳೆ ಪುಟಾಣಿ ಮಕ್ಕಳು ಭಾರತದ ಧ್ವಜ ಹಿಡಿದು, ಹೂ ನೀಡಿ ಸ್ವಾಗತಿಸಿದ್ದಾರೆ.