ಕರ್ನಾಟಕ

karnataka

ETV Bharat / international

ನೇರ ಪ್ರಸಾರದ ವೇಳೆ ಪಾಕ್​​​ ಸಂಸದನಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ನಾಯಕಿ - ಪ್ರಧಾನಿ ಇಮ್ರಾನ್​ ಖಾನ್

ಪ್ಯಾನಲ್​​ನಲ್ಲಿ ಪ್ರಧಾನಿ ಇಮ್ರಾನ್​ ಖಾನ್ ಪಕ್ಷದ ಪರವಾಗಿ ಮಾತನಾಡಲು ಮಹಿಳಾ ನಾಯಕಿ ಡಾ. ಫಿರ್ದೌಸ್​​ ಆಶಿಕ್ ಭಾಗಿಯಾಗಿದ್ದರು. ಈ ವೇಳೆ ವಿರೋಧ ಪಕ್ಷದ ಸಂಸದ ಖಾದಿರ್ ಖಾನ್ ಮಂಡೋಖೈಲ್​ ಆಗಮಿಸಿದ್ದರು. ಇಬ್ಬರ ನಡುವಿನ ಚರ್ಚೆ ತಾರಕಕ್ಕೇರಿ ನಾಯಕಿ ಕಪಾಳಮೋಕ್ಷ ಮಾಡಿದ್ದಾಳೆ.

pm-imran-khans-party-female-leader-slaps-pakistani-mp-during-debate-in-tv-show
ಟಿವಿ ನೇರಪ್ರಸಾರದ ವೇಳೆ ಸಂಸದನಿಗೆ ಮಹಿಳಾ ನಾಯಕಿಯಿಂದ ಕಪಾಳಮೋಕ್ಷ

By

Published : Jun 10, 2021, 5:30 PM IST

ಇಸ್ಲಾಮಾಬಾದ್ (ಪಾಕಿಸ್ತಾನ):ಟೆಲಿವಿಷನ್ ಡಿಬೇಟ್​​ನಲ್ಲಿ ಪ್ಯಾನಲ್​ ಚರ್ಚೆಗೆ ಆಗಮಿಸುವ ಅತಿಥಿಗಳ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗುವುದನ್ನು ನಾವು ನೋಡಿದ್ದೇವೆ. ಇದೇ ರೀತಿ ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯಲ್ಲಿ ಚರ್ಚೆ ಮಾಡುವ ವೇಳೆ ಸಿಟ್ಟಿಗೆದ್ದ ಮಹಿಳಾ ನಾಯಕಿ, ಪ್ರತಿ ಪಕ್ಷದ ಸಂಸದನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಪಾಕಿಸ್ತಾನದ ಎಕ್ಸ್‌ಪ್ರೆಸ್ ಟಿವಿಯಲ್ಲಿ ನಡೆಯುತ್ತಿದ್ದ ನೇರಪ್ರಸಾರದಲ್ಲಿಯೇ ಮಹಿಳೆ ಕಪಾಳಮೋಕ್ಷ ಮಾಡಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.

ಟಿವಿ ನೇರಪ್ರಸಾರದ ವೇಳೆ ಸಂಸದನಿಗೆ ಮಹಿಳಾ ನಾಯಕಿಯಿಂದ ಕಪಾಳಮೋಕ್ಷ

ಪ್ಯಾನಲ್​​ನಲ್ಲಿ ಪ್ರಧಾನಿ ಇಮ್ರಾನ್​ ಖಾನ್ ಪಕ್ಷದ ಪರವಾಗಿ ಮಾತನಾಡಲು ಪಕ್ಷದ ನಾಯಕಿ ಡಾ.ಫಿರ್ದೌಸ್​​ ಆಶಿಕ್ ಭಾಗಿಯಾಗಿದ್ದರು. ಈ ವೇಳೆ, ಪ್ರತಿ ಪಕ್ಷದ ಸಂಸದ ಖಾದಿರ್ ಖಾನ್ ಮಂಡೋಖೈಲ್​ ವಿರುದ್ಧ ವಾಗ್ದಾಳಿ ನಡೆಸಿದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ಸಿಟ್ಟಿಗೆದ್ದ ಮಹಿಳೆ ಸಂಸದ ಮಂಡೋಖೈಲ್​ಗೆ ಕಪಾಳಮೋಕ್ಷ ಮಾಡಿದ್ದಾರೆ.

ಮಾತಿನ ನಡುವೆ ಇಬ್ಬರು ಪ್ಯಾನಲಿಸ್ಟ್​ಗಳು ಪರಸ್ಪರ ವಾಗ್ದಾಳಿಯಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಒಬ್ಬರನ್ನೊಬ್ಬರು ನಿಂದಿಸಿದ್ದಾರೆ ಬಳಿಕ ತಾಳ್ಮೆ ಕಳೆದುಕೊಂಡ ಮಹಿಳಾ ನಾಯಕಿ ಸಂಸದನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ABOUT THE AUTHOR

...view details