ಇಸ್ಲಾಮಾಬಾದ್: ಇಮ್ರಾನ್ಖಾನ್ ತಮ್ಮ ಮೂವರು ಮಕ್ಕಳ ಆಸ್ತಿ ವಿವರವನ್ನು ಬಹಿರಂಗಪಡಿಸದ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅಲ್ಲಿನ ಸುಪ್ರೀಂಕೋರ್ಟ್ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ನ್ಯಾಯಮೂರ್ತಿ ಖಾಜಿ ಪೈಯೇಜ್ ಇಸಾ ಅವರ ಪತ್ನಿ ಸರಿನಾ ಇಸಾ ಅರ್ಜಿ ಸಲ್ಲಿಸಿದ್ದು, ಪ್ರಧಾನಿ ಇಮ್ರಾನ್ ಖಾನ್ ಅವರ ಮಕ್ಕಳು ಅಪ್ರಾಪ್ತರಾಗಿದ್ದು, ಅವರ ಆಸ್ತಿಯನ್ನು ತಮ್ಮ ಆದಾಯ ತೆರಿಗೆಯಲ್ಲಿ ಘೋಷಣೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಇದರ ಜೊತೆಗೆ ಇಮ್ರಾನ್ ಖಾನ್ ಫೆಡರಲ್ ಬ್ಯೂರೋ ಆಫ್ ರೆವೆನ್ಯೂ, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ನಲ್ಲಿ ಇಟ್ಟಿದ್ದ ದಾಖಲೆಗಳನ್ನು ಇಮ್ರಾನ್ ತೆಗೆದುಕೊಂಡಿದ್ದಾರೆ ಎಂದು ಸರಿನಾ ಇಸಾ ಆರೋಪಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಇಮ್ರಾನ್ ಖಾನ್ ಇತ್ತೀಚೆಗೆ ಅಕ್ರಮ ಆಸ್ತಿ ವಶಕ್ಕೆ ತೆಗೆದುಕೊಳ್ಳುವ ಘಟಕವನ್ನು ಸ್ಥಾಪಿಸಿದ್ದು, ಆ ಘಟಕಕ್ಕೆ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮಿರ್ಜಾ ಶಹಜಾದ್ ಅಖ್ತರ್ನನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ವ್ಯಕ್ತಿ ಕಾನೂನಿಗೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.