ಕರ್ನಾಟಕ

karnataka

ETV Bharat / international

ನೆನಪಿಸಿದ ಮಂಗಳೂರು ವಿಮಾನ ದುರಂತ: ಲ್ಯಾಂಡಿಂಗ್​ ವೇಳೆ ಫ್ಲೈಟ್​ ಸ್ಕಿಡ್​! - Plane skids off Istanbul runway,

ಲ್ಯಾಂಡಿಂಗ್​ ವೇಳೆ ವಿಮಾನ ಸ್ಕಿಡ್​ ಆಗಿ ಮೂವರು ಸಾವನ್ನಪ್ಪಿದ್ದು, 179 ಮಂದಿ ಗಾಯಗೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.

Plane skids, Plane skids off Istanbul runway, Plane skids off Istanbul runway news, ಲ್ಯಾಂಡಿಂಗ್​ ವೇಳೆ ವಿಮಾನ​ ಸ್ಕಿಡ್​, ಇಸ್ತಾಂಬುಲ್​ನಲ್ಲಿ ಲ್ಯಾಂಡಿಂಗ್​ ವೇಳೆ ವಿಮಾನ​ ಸ್ಕಿಡ್, ಇಸ್ತಾಂಬುಲ್​ ವಿಮಾನ ದುರಂತ ಸುದ್ದಿ, ಲ್ಯಾಂಡಿಂಗ್​ ವೇಳೆ ವಿಮಾನ​ ಸ್ಕಿಡ್ ಸುದ್ದಿ,
ಲ್ಯಾಂಡಿಂಗ್​ ವೇಳೆ 177 ಜನವಿದ್ದ ಫ್ಲೈಟ್​ ಸ್ಕಿಡ್

By

Published : Feb 6, 2020, 3:09 AM IST

Updated : Feb 6, 2020, 9:03 AM IST

ಇಸ್ತಾಂಬುಲ್​:ಲ್ಯಾಂಡಿಂಗ್​ ವೇಳೆ ರನ್​ವೇಯಿಂದ ವಿಮಾನ ಸ್ಕಿಡ್​ ಆಗಿ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ನುಗ್ಗಿ ಮೂರು ಭಾಗವಾಗಿದೆ. ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, 179 ಮಂದಿ ಗಾಯಗೊಂಡಿರುವ ಘಟನೆ ಇಸ್ತಾಂಬುಲ್ ಅಂತಾರಾಷ್ಟ್ರೀಯ​ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಲ್ಯಾಂಡಿಂಗ್​ ವೇಳೆ ಫ್ಲೈಟ್​ ಸ್ಕಿಡ್

ಇಜ್ಮೀರ್​ನಿಂದ ಇಸ್ತಾಂಬುಲ್​ಗೆ ಬಂದ ವಿಮಾನದಲ್ಲಿ 6 ಸಿಬ್ಬಂದಿ ಮತ್ತು 177 ಪ್ರಯಾಣಿಕರಿದ್ದರು. ಸಬಿಹಾ ಗೋಕ್ಸೆನ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವೇಳೆ ವಿಮಾನ ಸ್ಕಿಡ್​ ಆಗಿದೆ. ಪರಿಣಾಮ ರನ್​ವೇ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ವಿಮಾನ ನುಗ್ಗಿ ಮೂರು ಭಾಗವಾಗಿದೆ.

ವಿಮಾನ ದುರಂತ ಸಂಭವಿಸುತ್ತಿದ್ದಂತೆ ರಕ್ಷಣಾ ಕಾರ್ಯ ಭರದಿಂದ ಸಾಗಿತ್ತು. ವಿಮಾನದಲ್ಲಿ ಸಿಲುಕಿಕೊಂಡವರನ್ನು ರಕ್ಷಣಾ ಸಿಬ್ಬಂದಿ ಹೊರ ತರಲು ಹರಸಾಹಸ ಪಟ್ಟರು. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, 179 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಈ ಘಟನೆಗೆ ‘ರಫ್​ ಲ್ಯಾಂಡಿಂಗ್’​ ಕಾರಣವೆಂದು ಟರ್ಕಿ ದೇಶದ ಸಾರಿಗೆ ಸಚಿವ ಮೆಹ್ಮತ್​ ಹೇಳಿದ್ದಾರೆ. ಈ ದುರಂತದ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

Last Updated : Feb 6, 2020, 9:03 AM IST

ABOUT THE AUTHOR

...view details