ಇಸ್ಲಾಮಾಬಾದ್: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ರನ್ನು ಪಾಕ್ ಸರ್ಕಾರ ಬಿಡುಗಡೆ ಮಾಡುತ್ತಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆಯಬೇಕು ಎಂದು ಪಾಕ್ ಜನತೆ ಟ್ವಿಟರ್ನಲ್ಲಿ ಬೇಡಿಕೆ ಇಟ್ಟಿದ್ದರು.
ಕಾಶ್ಮೀರ ಸಮಸ್ಯೆ ಬಗೆಹರಿಸುವ ವ್ಯಕ್ತಿಯೇ ನೊಬೆಲ್ಗೆ ಅರ್ಹ: ಇಮ್ರಾನ್ ಖಾನ್
"ನಾನು ಈ ದೊಡ್ಡ ಪುರಸ್ಕಾರಕ್ಕೆ ಅರ್ಹನಲ್ಲ. ಯಾವ ವ್ಯಕ್ತಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತಾರೋ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು" ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್
ಕಾಶ್ಮೀರದ ಜನತೆಯ ಇಷ್ಟದ ಅನುಸಾರ ಕಾಶ್ಮೀರದ ಸಮಸ್ಯೆಯನ್ನು ಸರಿಪಡಿಸಿ, ಉಭಯ ದೇಶದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವ ವ್ಯಕ್ತಿ ನಿಜಕ್ಕೂ ನೊಬೆಲ್ ಪುರಸ್ಕಾರಕ್ಕೆ ಸೂಕ್ತ ವ್ಯಕ್ತಿ ಎಂದು ಇಮ್ರಾನ್ ಖಾನ್ ಟ್ವೀಟ್ ಮೂಲಕ ಹೇಳಿದ್ದಾರೆ.
#NobelPeacePrizeForImranKhan ಎನ್ನುವ ಹ್ಯಾಷ್ಟ್ಯಾಗ್ ಮೂಲಕ ಪಾಕಿಗಳು ಆನ್ಲೈನ್ನಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿಯ ಸಹಿಯನ್ನು ಸಂಗ್ರಹಿಸಿದ್ದಾರೆ.