ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್ ಸ್ಪೈವೇರ್ ಸಾಫ್ಟ್ವೇರ್ ಕುರಿತು ವಿವಾದ ಸೃಷ್ಟಿಯಾಗಿದೆ. ಜನಪ್ರತಿನಿಧಿಗಳು, ಪತ್ರಕರ್ತರು ಸೇರಿ ಖ್ಯಾತನಾಮರ ಮೇಲೆ ಕೇಂದ್ರ ಕದ್ದಾಲಿಕೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಆದರೆ, ಇದೀಗ ಪಾಕಿಸ್ತಾನ ಪಿಎಂ ಇಮ್ರಾನ್ ಖಾನ್ ಕೂಡ ಈ ಸ್ಪೈವೇರ್ ಕಣ್ಗಾವಲಿಗೆ ಒಳಗಾಗಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಫ್ರಾನ್ಸ್‌ನ ಫಾರ್‌ಬಿಡನ್ ಸ್ಟೋರೀಸ್ ಸಮೂಹ ನಡೆಸಿದ ತನಿಖಾ ವರದಿಯನ್ನು ಭಾರತ ಸೇರಿ ವಿಶ್ವದ 15 ಮಾಧ್ಯಮ ಸಂಸ್ಥೆಗಳ ಜತೆ ಹಂಚಿಕೊಂಡಿದೆ.
ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಭಾರತದ 1,000ಕ್ಕೂ ಹೆಚ್ಚು ದೂರವಾಣಿ ಸಂಖ್ಯೆಗಳು ಕಣ್ಗಾವಲು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೆ, ನೂರಾರು ಜನರು ಪಾಕಿಸ್ತಾನದವರಾಗಿದ್ದರು, ಇದರಲ್ಲಿ ಒಂದು ಪ್ರಧಾನಿ ಇಮ್ರಾನ್ ಸಹ ಒಮ್ಮೆ ಬಳಸಿದ್ದರು. ಆದರೆ, ಪಿಎಂ ಇಮ್ರಾನ್ ಅವರ ಸಂಖ್ಯೆಯ ಕಣ್ಗಾವಲು ಪ್ರಯತ್ನ ಯಶಸ್ವಿಯಾಗಿದೆಯೇ ಎಂಬುದರ ಕುರಿತು ಪೋಸ್ಟ್ ಬಹಿರಂಗಪಡಿಸಿಲ್ಲ.