ಇಸ್ಲಾಮಾಬಾದ್: ಸೆನೆಟ್ ಚುನಾವಣೆ, ಸರ್ಕಾರದ ವಿರುದ್ಧ ದೀರ್ಘಾವಧಿಯ ಜನಾಂದೋಲನ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅವಿಶ್ವಾಸ ನಿರ್ಣಯಕ್ಕೆ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ಪಿಡಿಎಂ ಮುಖ್ಯಸ್ಥ ಮೌಲಾನಾ ಫಜ್ಲೂರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಗುರುವಾರ ದೂರವಾಣಿಯ ಮೂಲಕ ಮಾತನಾಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿಯ (ಪಿಡಿಎಂ) 11 ಪಕ್ಷಗಳ ಸಭೆಯ ಮುನ್ನವೇ ಈ ಬೆಳವಣಿಗೆ ನಡೆದಿದೆ.
ಸರ್ಕಾರ ವಿರೋಧಿ ಚಳವಳಿಯಲ್ಲಿ ಪಿಎಂಎಲ್-ಎನ್ ತನ್ನ ಸಂಪೂರ್ಣ ಬಲವನ್ನು ಬಳಸಲು ಸಿದ್ಧವಾಗಿದೆ ಎಂಬುದನ್ನು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ರಾಜಕಾರಣಿಗಳ ಚರ್ಚೆಯು ಸೆನೆಟ್ ಚುನಾವಣೆ, ಪಿಡಿಎಂನ ಜಂಟಿ ಕಾರ್ಯತಂತ್ರ ಮತ್ತು ಪಿಪಿಪಿಯ ಅವಿಶ್ವಾಸ ನಿರ್ಣಯದ ಮೇಲೆಯೇ ಕೇಂದ್ರೀಕೃತವಾಗಿದೆ ಎಂದು ವರದಿಯಾಗಿದೆ.
ಓದಿ:ಐಸ್ ಪ್ಲಾಂಟ್ನಲ್ಲಿ ಅಮೋನಿಯಾ ಸೋರಿಕೆ: ಇಬ್ಬರ ಸಾವು, 90 ಮಂದಿ ಅಸ್ವಸ್ಥ
ಮೂಲಗಳ ಪ್ರಕಾರ, ಉಭಯ ನಾಯಕರು ಸರ್ಕಾರಿ ವಿರೋಧಿ ಆಂದೋಲನದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ನವಾಜ್ ಅವರು ಫಜ್ಲೂರ್ ಮಂಡಿಸಿದ ಪ್ರಸ್ತಾವನೆಗಳಿಗೆ ಸಮ್ಮತಿಸಿದ್ದಾರೆ. ಪಿಡಿಎಂನ ನಿರ್ಧಾರಕ್ಕೆ ಪಿಎಂಎಲ್-ಎನ್ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
==============================================
Islamabad:Ahead of a meeting of 11-party alliance of Pakistan Democratic Movement (PDM) to finalise strategies for Senate elections, date for long March and Pakistan Peoples Party (PPP) no-confidence motion, PDM chief Maulana Fazlur Rehman and former prime minister Nawaz Sharif on Thursday has reportedly spoken over the phone and it was decided that the PML-N is ready to use full force in the anti-government movement, reported Geo News.
The discussion of the politicians reportedly centred around PDM's joint strategy on the Senate elections and PPP's no-confidence motion - both to be debated today.
As per sources, both leaders had consultations over the anti-government movement and Nawaz have agreed with the proposals put forward by Fazl, giving assurances to the PDM chief of PML-N's full support on whatever PDM decides, cited Geo News.