ಲಾಹೋರ್: ಪುಲ್ವಾಮಾ ಉಗ್ರದಾಳಿಯ ಬಳಿಕ ವಿಶ್ವದ ಒತ್ತಡಕ್ಕೆ ಮಣಿದು ಪಾಕ್ ಸರ್ಕಾರ ಜೈಷೆ ಮೊಹಮ್ಮದ್ ಸಂಘಟನೆಯನ್ನು ತನ್ನ ವಶಕ್ಕೆ ಪಡೆದಿದೆ ಎನ್ನುವ ವರದಿಗೆ ಈಗ ಇಮ್ರಾನ್ ಖಾನ್ ಸರ್ಕಾರ ಉಲ್ಟಾ ಹೊಡೆದಿದೆ.
ಜೈಷೆ ಸಂಘಟನೆಯ ಮೇಲೆ ಸರ್ಕಾರದ ಹಿಡಿತವಿಲ್ಲ.. ಪಾಕ್ ಮತ್ತೆ ಕಳ್ಳಾಟ!
ಲಾಹೋರ್ನಿಂದ 400ಕಿ.ಮೀ ದೂರದಲ್ಲಿರುವ ಬಹಾವಲ್ಪುರದಲ್ಲಿರುವ ಜೈಷೆ ಮುಖ್ಯಕಚೇರಿಯನ್ನು ಸರ್ಕಾರ ವಶಕ್ಕೆ ಪಡೆದಿದೆ ಎಂಬ ಮಾಹಿತಿಯನ್ನ ಸಚಿವ ಫವಾದ್ ಚೌಧರಿ ಗುರುವಾರ ಹೇಳಿದ್ದರು.
ಫವಾದ್ ಚೌಧರಿ
ಸದ್ಯ ಈ ಹೇಳಿಕೆಯನ್ನು ಹಿಂಪಡೆದಿರುವ ಪಾಕ್ ಸಚಿವ, ನಮ್ಮ ಸರ್ಕಾರ ಜೈಷೆ ಸಂಘಟನೆಯ ಮೇಲೆ ಹಿಡಿತ ಸಾಧಿಸಿಲ್ಲ ಎಂದಿದ್ದಾರೆ.
ಇಸ್ಲಾಮಿಕ್ ಸೆಮಿನರೀಸ್ನಲ್ಲಿ ಅಧ್ಯಯನ ನಡೆಸುತ್ತಿರುವ 600 ವಿದ್ಯಾರ್ಥಿಗಳಿಗೆ ಹಾಗೂ 70 ಶಿಕ್ಷಕರಿಗೆ ಸರ್ಕಾರ ಭದ್ರತೆ ನೀಡಿದೆ. ಈ ಸೆಮಿನರೀಸ್ ಹಾಗೂ ಜೈಷೆ ಸಂಘಟನೆಗೆ ಯಾವುದೇ ವಿಧವಾದ ಸಂಬಂಧವಿಲ್ಲ ಎಂದು ಸರ್ಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated : Feb 24, 2019, 1:30 PM IST