ಕರ್ನಾಟಕ

karnataka

ETV Bharat / international

ಪಾಕಿಸ್ತಾನಿ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಯುರೋಪ್! - ಪಾಕಿಸ್ತಾನಿ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಯುರೋಪ್

ಯುರೋಪಿಯನ್ ದೇಶಗಳಲ್ಲಿ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್​ನ (ಪಿಐಎ) ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್​ನ ವಿಮಾನಗಳಿಗೆ ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್​ನಲ್ಲಿ‌ ಆರು ತಿಂಗಳ ಕಾಲ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

pia
pia

By

Published : Jul 3, 2020, 1:34 PM IST

Updated : Jul 3, 2020, 2:50 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಅಂತರಾಷ್ಟ್ರೀಯ ಚಿತ್ರಣವು ಹಲವಾರು ವಿಷಯಗಳ ಹಿನ್ನೆಲೆ ಹದಗೆಡುತ್ತಲೇ ಇದೆ. ಇದೀಗ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್​ಗೆ ಯುರೋಪಿಯನ್ ಒಕ್ಕೂಟ ತೀವ್ರ ಹೊಡೆತ ನೀಡಿದೆ.

ಲಾಕ್‌ಡೌನ್ ಕ್ರಮಗಳು ಸರಾಗಗೊಂಡಿರುವ ಹೊರತಾಗಿಯೂ ಪಾಕಿಸ್ತಾನಿಗಳಿಗೆ ವಿವಿಧ ಯುರೋಪಿಯನ್ ದೇಶಗಳಿಗೆ ಪ್ರವೇಶಿಸಲು ಅನುಮಾತಿ ನಿರಾಕರಿಸಲಾಗಿದೆ. ಯುರೋಪಿಯನ್ ದೇಶಗಳಲ್ಲಿ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್​ನ (ಪಿಐಎ) ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

"ಮೊದಲು, ಪಾಕಿಸ್ತಾನಿಗಳಿಗೆ ವಿವಿಧ ದೇಶಗಳಿಗೆ ಪ್ರವೇಶಿಸಲು ಅನುಮತಿ ಇಲ್ಲದಂತಾಯಿತು. ಬಳಿಕ ಗಲ್ಫ್ ಏರ್ಲೈನ್ಸ್ ಪಾಕಿಸ್ತಾನಕ್ಕೆ ಬರಲು ನಿರಾಕರಿಸಿತು. ಈಗ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್​ಗೆ ಯುರೋಪ್​ಗೆ ಪ್ರವೆಶಿಸಲು ಅವಕಾಶವಿಲ್ಲ!" ಎಂದು ಪಾಕಿಸ್ತಾನದ ಖ್ಯಾತ ಪತ್ರಕರ್ತ ನಜಮ್ ಸೇಥಿ ಟ್ವೀಟ್ ಮಾಡಿದ್ದಾರೆ.

ಜುಲೈನಿಂದ ಯುರೋಪಿಯನ್ ಒಕ್ಕೂಟದ ಗಡಿಗಳು ತೆರೆದಿದ್ದರೂ, ಯುರೋಪ್​ಗೆ ಪ್ರವೆಶಿಸಲು ಅನುಮತಿ ಇರುವ 54 ದೇಶಗಳ ಕರಡು ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿರಲಿಲ್ಲ.

ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್​ನ ವಿಮಾನಗಳಿಗೆ ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್​ನಲ್ಲಿ‌ ಆರು ತಿಂಗಳ ಕಾಲ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Jul 3, 2020, 2:50 PM IST

ABOUT THE AUTHOR

...view details