ಕರ್ನಾಟಕ

karnataka

ETV Bharat / international

ನ. 24ರೊಳಗೆ ಕೋರ್ಟ್​ಗೆ ಹಾಜರಾಗುವಂತೆ ಷರೀಫ್​ಗೆ ನೋಟಿಸ್ - Nawaz Sharif Latest news

ಅನಾಗೋಗ್ಯದ ನೆಪ ಹೇಳಿ ಕಳೆದ ನವೆಂಬರ್​ ತಿಂಗಳಿಂದಲೂ ಇಂಗ್ಲೆಂಡ್​ನಲ್ಲಿ ವಾಸವಾಗಿರುವ ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​​ಗೆ ಇಸ್ಲಾಮಾಬಾದ್ ಹೈಕೋರ್ಟ್​​ ನೋಟಿಸ್​ ಜಾರಿ ಮಾಡಿ ಎಚ್ಚರಿಕೆ ನೀಡಿದೆ.

Ex-PM Sharif
Ex-PM Sharif

By

Published : Oct 10, 2020, 4:26 PM IST

ಇಸ್ಲಾಮಾಬಾದ್​: ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಲಂಡನ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ ಇಸ್ಲಾಮಾಬಾದ್​​ ಹೈಕೋರ್ಟ್​​ ನೋಟಿಸ್​ ಜಾರಿ ಮಾಡಿದೆ.

ನವೆಂಬರ್​​ 24ರೊಳಗೆ ಕೋರ್ಟ್​ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಘೋಷಿತ ಅಪರಾಧಿ ಎಂದು ಘೋಷಣೆ ಮಾಡುವುದನ್ನ ತಪ್ಪಿಸಿಕೊಳ್ಳಬೇಕಾದರೆ ಹಾಜರಾಗುವಂತೆ ಹೇಳಿದೆ. ಅಲ್​​ ಅಜೀಜಿಯಾ ಸ್ಟೀಲ್​ ಮಿಲ್​ ಮತ್ತು ಅವೆನ್​ಫಿಲ್ಡ್​ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಇಸ್ಲಾಮಾಬಾದ್​ ಹೈಕೋರ್ಟ್​ ಲಿಖಿತ ಆದೇಶ ಹೊರಡಿಸಿದೆ.

ಯುಕೆಯಿಂದ ನವಾಜ್​​ ಷರೀಫ್​​​​​ ಕರೆತರಲು ಮುಂದಾದ ಇಮ್ರಾನ್​ ಖಾನ್​!

ಭ್ರಷ್ಟಾಚಾರ, ಅಕ್ರಮ ಭೂ ಹಂಚಿಕೆ, ಅಕ್ರಮ ಹಣ ವರ್ಗಾವಣೆ ಸೇರಿ ವಿವಿಧ ಪ್ರಕರಣಗಳಲ್ಲಿ ನವಾಜ್​ ಷರೀಫ್​ ಭಾಗಿಯಾಗಿರುವ ಆರೋಪವಿದ್ದು, ಅವರನ್ನ ಪಾಕ್​ಗೆ ಕರೆತರಲು ಈಗಾಗಲೇ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​ ಯೋಜನೆ ರೂಪಿಸಿದ್ದಾರೆ. ಇದರ ಮಧ್ಯೆ ಹೈಕೋರ್ಟ್​ ನೋಟಿಸ್​ ಜಾರಿಗೊಳಿಸಿದೆ. ಒಂದು ವೇಳೆ, ಕೋರ್ಟ್​ಗೆ ಹಾಜರಾಗಲು ವಿಫಲವಾದರೆ ಜಾಮೀನು ರಹಿತ ಅರೆಸ್ಟ್​ ವಾರಂಟ್​ ಜಾರಿಗೊಳಿಸಲಾಗುವುದು ಎಂದು ಕೋರ್ಟ್​​ ತಿಳಿಸಿದೆ.

ABOUT THE AUTHOR

...view details