ಕರ್ನಾಟಕ

karnataka

ETV Bharat / international

ಗಂಡು ಮಗುವಿಗಾಗಿ ನಕಲಿ ಪೀರನ ಮಾತಿನಂತೆ ತಲೆಗೆ ಮೊಳೆ ಹೊಡೆದುಕೊಂಡ ಗರ್ಭಿಣಿ - ಗಂಡು ಸಂತಾನಕ್ಕಾಗಿ ತಲೆಗೆ ಮೊಳೆ

ಸಂತ್ರಸ್ತೆ ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿದ್ದಾಳೆ. ನಾಲ್ಕನೇ ಬಾರಿಗೂ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಆಕೆಯನ್ನು ಬಿಟ್ಟು ಹೋಗುವುದಾಗಿ ಪತಿ ಬೆದರಿಕೆ ಹಾಕಿದ್ದನಂತೆ.

Pakistan woman gets nail hammered into her head after directions of fake 'peer'
ಗಂಡು ಮಗುವಿಗಾಗಿ 'ಪಂಡಿತ'ನ ಮಾತಿನಂತೆ ತಲೆಗೆ ಮೊಳೆ ಹೊಡೆದುಕೊಂಡ ಗರ್ಭಿಣಿ..

By

Published : Feb 9, 2022, 7:28 AM IST

ಪೇಶಾವರ(ಪಾಕಿಸ್ತಾನ):ಗಂಡು ಮಗು ಬೇಕೆಂದು ಗರ್ಭಿಣಿಯೊಬ್ಬಳು ನಕಲಿ ಪೀರ (ಕನ್ನಡದಲ್ಲಿರುವಂತೆ ಅಳಲೆಕಾಯಿ ಪಂಡಿತ) ನೀಡಿರುವ ಸೂಚನೆಯಂತೆ ತಲೆಗೆ ಮೊಳೆ ಹೊಡೆದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಕಿಸ್ತಾನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

ಮಹಿಳೆಯನ್ನು ಪೇಶಾವರ ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೇಶಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

ಸಂತ್ರಸ್ತೆ ಮೂರು ಹೆಣ್ಣು ಮಕ್ಕಳ ತಾಯಿಯಾಗಿದ್ದು, ನಾಲ್ಕನೇ ಬಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಆಕೆಯನ್ನು ಬಿಟ್ಟು ಹೋಗುವುದಾಗಿ ಪತಿ ಬೆದರಿಕೆ ಹಾಕಿದ್ದನಂತೆ. ಇದರಿಂದ ಆಘಾತಗೊಂಡ ಮಹಿಳೆ ಈ ರೀತಿಯಾಗಿ ನಡೆದುಕೊಂಡಿದ್ದಾಳೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ:'ಹಿಜಾಬ್​ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಶಾಲಾ ಪ್ರವೇಶ ನೀಡದಿರುವುದು ಅತ್ಯಂತ ಭೀಕರ':ಹಿಜಾಬ್​ ವಿವಾದಕ್ಕೆ ಮಲಾಲಾ ಪ್ರತಿಕ್ರಿಯೆ

ತಲೆಗೆ ಮೊಳೆ ಹೊಡೆದುಕೊಂಡ ತಕ್ಷಣ ನೋವಿನಿಂದ ಚೀರಿದಾಗ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details